ಮಾಡನ್ನೂರು ಮಖಾಂ ಉರೂಸ್ ಪೋಸ್ಟರ್ ಬಿಡುಗಡೆ

0

ಪುತ್ತೂರು: ಮಾಡನ್ನೂರು ದರ್ಗಾ ಶರೀಫ್ ಮಖಾಂ ಉರೂಸ್ ಕಾರ್ಯಕ್ರಮ ಫೆ.13ರಿಂದ 20ರ ವರೆಗೆ ಮಾಡನ್ನೂರು ಶಹೀದಿಯಾ ನಗರದಲ್ಲಿ ನಡೆಯಲಿದ್ದು ಉರೂಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಸಯ್ಯದ್ ಬುರ್ಹಾನ್ ಅಲಿ ತಂಙಳ್ ಅವರು ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಮಾಡನ್ನೂರು ಜಮಾಅತ್ ಕಮಿಟಿ ಅಧ್ಯಕ್ಷ ಕೆ.ಕೆ ಇಬ್ರಾಹಿಂ ಹಾಜಿ, ಪ್ರ.ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್, ಉಪಾಧ್ಯಕ್ಷರುಗಳಾದ ಬಿ.ಎಂ ಅಬ್ದುಲ್ಲ ಚಾಲ್ಕರೆ, ಸಿ.ಎಚ್ ಅಬ್ದುಲ್ ಅಝೀಝ್, ನೂರುಲ್ ಹುದಾದ ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ ನೆಕ್ಕರೆ, ಮಾಡನ್ನೂರು ಮಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ, ನೂರುಲ್ ಹುದಾದ ಪ್ರಿನ್ಸಿಪಾಲ್ ಅಡ್ವೊಕೇಟ್ ಹನೀಫ್ ಹುದವಿ ಹಾಗೂ ಮಾಡನ್ನೂರು ಜಮಾಅತ್ ಕಮಿಟಿಯವರು, ನೂರುಲ್ ಹುದಾ ಸಮಿತಿಯವರು ಉಪಸ್ಥಿತರಿದ್ದರು.

ಉರೂಸ್ ಕಾರ್ಯಕ್ರಮದಲ್ಲಿ ಅಹ್ಲ್‌ಬೈತ್ ಪ್ರಮುಖರೂ, ಪ್ರಸಿದ್ಧ ಉಲಮಾ, ಉಮರಾ ನಾಯಕರು, ಅಂತರ್ರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here