ಅರಂತೋಡು: ದುರ್ಗಾ ಮಾತಾ ಮಹಿಳಾ ಮಂಡಲದ ವತಿಯಿಂದ ಸಂಗೀತ ತರಬೇತಿಯ ಉದ್ಘಾಟನೆ

0

 

ಅರಂತೋಡು: ದುರ್ಗಾ ಮಾತಾ ಮಹಿಳಾ ಮಂಡಲದ ವತಿಯಿಂದ ಸಂಗೀತ ತರಬೇತಿಯ ಉದ್ಘಾಟನೆಯು ಸೆ. 16 ರಂದು ಗ್ರಾಮ ಪಂಚಾಯತ್ ಸಭಾಭವನ ಅರಂತೋಡುನಲ್ಲಿ ನಡೆಯಿತು.

ಕಾರ್ಯಕ್ರಮ ದಲ್ಲಿ ದುರ್ಗಾ ಮಾತಾ ಭಜನಾ ಮಂಡಳಿಯ ಅಧ್ಯಕ್ಷರಾದ ಕೆ.ಆರ್ ಪದ್ಮನಾಭ, ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ದ ಅಧ್ಯಕ್ಷ,ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಗೋಪಾಲ ಕಾಟೂರ್.ಹಾಗೂ ದುರ್ಗಾ ಮಾತಾ ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಊರಿನ ಮಹಿಳೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಶ್ರೀಮತಿ ಪುಷ್ಪಾ ಮೇದಪ್ಪ,ಉದ್ಘಾಟನೆ ಯನ್ನು ಹರಿಣಿ ದೇರಾಜೆ,
ಸಂಗೀತ ಶಿಕ್ಷಕಿ ಶ್ರೀಮತಿ ಆರತಿ ಪುರುಷೋತ್ತಮ ,
ಕುಮಾರಿ ಶ್ವೇತಾ ಅರಮನೆಗಾಯ,
ಶ್ರೀಮತಿ ಯಶೋಧ ಹೂವಯ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮ ದಲ್ಲಿ ರೀನಾ ಚಂದ್ರಶೇಖರ ಅವರು ಪ್ರಾರ್ಥಿಸಿ, ಶ್ರೀಮತಿ ಭಾರತಿ ಪುರುಷೋತಮ್ ಸ್ವಾಗತಿಸಿ, ಶ್ರೀಮತಿ ಗೀತಾ ಶೇಖರ್ ವಂದಿಸಿದರು. ಕಾರ್ಯಕ್ರಮ ನಿರೂಪಣೆ ಯನ್ನು ಶ್ರೀಮತಿ ಭವಿತ ಕುಸುಮದರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here