ಸುಳ್ಯ ಭಜನಾ ಪರಿಷತ್ತಿನ ಸ್ಥಾಪಕಾಧ್ಯಕ್ಷ ಅರ್ಗುಡಿ ವಿಶ್ವನಾಥ ರೈಯವರಿಗೆ ಹಿರಿಯ ಸಾಧಕ ಭಜಕ ಪ್ರಶಸ್ತಿ

0

 

 

ಸುಳ್ಯ ತಾಲೂಕು ಭಜನಾ ಪರಿಷತ್ ನ ಸ್ಥಾಪಕಾಧ್ಯಕ್ಷ ಬೀದಿಗುಡ್ಡೆಯ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ ಇದರ ಸ್ಥಾಪಕಾಧ್ಯಕ್ಷ, ಅರ್ಗುಡಿ ವಿಶ್ವನಾಥ ರೈಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಪರಿಷತ್ತು ಕೊಡಮಾಡುವ ಹಿರಿಯ ಸಾಧಕ ಭಜಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಬಳ್ಪ ಗ್ರಾಮದ ಹಲವು ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮ ಕಲಶೋತ್ಸವ ಸಮಿತಿ, ಜಾತ್ರಾ ಸಮಿತಿಗಳಲ್ಲಿ ಪದಾಧಿಕಾರಿಯಾಗಿ ದುಡಿದು ಧಾರ್ಮಿಕ, ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಅರ್ಗುಡಿ ವಿಶ್ವನಾಥ ರೈಯವರು
ಸುಳ್ಯ ತಾಲೂಕು ಭಜನಾ ಪರಿಷತ್ತಿನ ಸ್ಥಾಪಕಾಧ್ಯಕ್ಷರಾಗಿದ್ದಾರಲ್ಲದೆ ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ನೀಡಿರುತ್ತಾರೆ.
ದ.ಕ., ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 15 ತಾಲೂಕುಗಳಲ್ಲಿ 15 ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಸುಳ್ಯ ತಾಲೂಕಿನಲ್ಲಿ ವಿಶ್ವನಾಥ ರೈಯವರು ಪ್ರಥಮ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಬೀದಿಗುಡ್ಡೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯನ್ನು 1980ರಲ್ಲಿ ಸ್ಥಾಪಿಸಿ, ಭಜನಾ ಮಂಡಳಿಯ ಬೆಳ್ಳಿಹಬ್ಬದ ತನಕ 11 ಬಾರಿ ಅಧ್ಯಕ್ಷರಾಗಿ ದುಡಿದು ಪ್ರಸ್ತುತ ಸಕ್ರಿಯ ಸದಸ್ಯರಾಗಿ ಮಾರ್ಗದರ್ಶಕರಾಗಿದ್ದಾರೆ. 2018ರಲ್ಲಿ ಹನುಮಗಿರಿಯಲ್ಲಿ ನಡೆದ ಭಜನೋತ್ಸವದಲ್ಲಿ ಇವರ ನಾಯಕತ್ವದ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ತಂಡ ಉತ್ತಮ ತಂಡ ಪ್ರಶಸ್ತಿಯನ್ನು ಪಡೆದಿರುವುದಲ್ಲದೆ ವಿಶ್ವನಾಥ ರೈಯವರು ಉತ್ತಮ ಹಿರಿಯ ಭಜಕ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

LEAVE A REPLY

Please enter your comment!
Please enter your name here