ಎಡಮಂಗಲ : ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸನ್ಮಾನ

0

 

 

ಎಡಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಎಡಮಂಗಲದ ಶಿವಪಾರ್ವತಿ ಸಭಾಂಗಣದಲ್ಲಿ ಸೆಪ್ಟೆಂಬರ್ 22 ರಂದು ನಡೆಯಿತು.
ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಎಂ.ಎಸ್. ದೀಪಬೆಳಗಿಸಿ ಉದ್ಘಾಟಿಸಿ, ರೈತರಿಗೆ ಸಂಘದ ಬಗ್ಗೆ ಮಾಹಿತಿ ನೀಡಿದರು ಸಂಘವು ಕಳೆದ ಸಾಲಿನಲ್ಲಿ 910874.39 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 25 % ಡಿವಿಡೆಂಟ್ ನೀಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ನಿಧನರಾದ ನಿರ್ದೇಶಕ ವಿಶ್ವೇಶ್ವರಯ್ಯ ಆಚಾರ್ಯ, ಸದಸ್ಯರಾದ ದಾಮೋದರ ಪರಪ್ಪು, ಕುಶಾಲಪ್ಪ ನಾಯ್ಕ, ನಾರಾಯಣ ಜಾಕೆ, ಚಿದಾನಂದ ಪರ್ಲ, ಪಾರ್ವತಿ, ಗಣಪಯ್ಯ ನಾಯ್ಕರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


ವೇದಿಕೆಯಲ್ಲಿ ಉಪಾಧ್ಯಕ್ಷ ನಾರಾಯಣ ನಾಯ್ಕ ನಿರ್ದೇಶಕರಾದ ಈಶ್ವರ್ ಜಾಲ್ತಾರು, ಜಗದೀಶ್ ಶೆಟ್ಟಿ, ಜಯಪ್ರಕಾಶ್ ಕೆ., ಹೊನ್ನಪ್ಪ ಗೌಡ ಎಂ., ಹೊನ್ನಪ್ಪ ಗೌಡ ಐಪಳ, ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್, ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಬಾಲಕೃಷ್ಣ ಕೆ. ಹೇಮಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಾಧವ ವೈ ವರದಿ ವಾಚಿಸಿದರು. ವಿಜಯ ರಾಮಣ್ಣ ಪ್ರಾರ್ಥಿಸಿದರು ನಿರ್ದೇಶಕ ಈಶ್ವರ್ ಜಾಲ್ತಾರು ವಂದಿಸಿದರು.

LEAVE A REPLY

Please enter your comment!
Please enter your name here