ಬೆಳ್ಳಾರೆ: ಸ್ನೇಹಿತರ ಕಲಾ ಸಂಘದ ನೂತನ ಪದಾಧಿಕಾರಗಳ ಪದಗ್ರಹಣ

0

 

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ 2022-23ನೇ ಸಾಲಿನ ನೂತನ ಪದಾಧಿಕಾರಗಳ ಪದಗ್ರಹಣ ಕಾರ್ಯಕ್ರಮ ಸೆ. 23ರಂದು ನಡೆಯಿತು.
ನೂತನ ಅಧ್ಯಕ್ಷರಾಗಿ ವಸಂತ ಉಲ್ಲಾಸ್ ಅಧಿಕಾರ ಸ್ವೀಕರಿದರು. ಈ ಸಮಾರಂಭದಲ್ಲಿ ಮಲೆನಾಡ ಸಿರಿ ಶಿಕ್ಷಕ ಪ್ರಶಸ್ತಿ 2022 ಪುರಸ್ಕೃತರಾದ ಸಂಘದ ಪೂರ್ವಧ್ಯಕ್ಷರಾದ ಕೊರಗಪ್ಪ ಕುರುಂಬುಡೆಲು ಮತ್ತು ಯುವಜನ ಸಂಯುಕ್ತ ಮಂಡಳಿ ಸುಳ್ಯ ತಾಲೂಕು ಇದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂಘದ ನಿಕಟ ಪೂರ್ವಧ್ಯಕ್ಷ ಸಂಜಯ್ ನೆಟ್ಟಾರುರನ್ನು ಈ ಸಂದರ್ಭದಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ವಸಂತ ಉಲ್ಲಾಸ್ ಅಧ್ಯಕ್ಷತೆ ವಹಿಸಿದ್ದರು. ಸುಪ್ರೀತ್ ಬಸ್ತಿಗುಡ್ಡೆ ಸ್ವಾಗತಿಸಿ ಕಾರ್ಯದರ್ಶಿ ಆನಂದ ಉಮಿಕ್ಕಳ ವಂದಿಸಿದರು ಶ್ರೀನಿವಾಸ ಕುರುoಬುಡೆಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here