ಕನಕಮಜಲು : ಪುರುಷರ ಮುಕ್ತ ಕೇರಂ ಪಂದ್ಯಾಟ

0

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ) ಕನಕಮಜಲು ಇದರ ಆಶ್ರಯದಲ್ಲಿ ಪುರುಷರ ಮುಕ್ತ ಕೇರಂ ಪಂದ್ಯಾಟವು ಸೆ. 25 ರಂದು ಶ್ರೀ ಆತ್ಮಾರಾಮ ಸಭಾಭವನ ಕನಕಮಜಲು ಇಲ್ಲಿ ನಡೆಯಿತು.
ಪಂದ್ಯಕೂಟದ ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಚಂದ್ರಶೇಖರ ನೆಡಿಲು ವಹಿಸಿದರು. ಪಂದ್ಯಕೂಟದ ಉದ್ಘಾಟನೆಯನ್ನು ಆತ್ಮರಾಮ ಭಜನಾ ಮಂದಿರ ಕನಕಮಜಲು ಇದರ ಕಾರ್ಯದರ್ಶಿ ಈಶ್ವರ ಕೋರಂಬಡ್ಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಮ್ಮೊಂದಿಗೆ ಆದಿತ್ಯ ಸೋಲಾರ್ ರಾಜ್ ಎಂಟರ್ ಪ್ರೈಸಸ್ ಸುಳ್ಯ ಅಶೋಕ್ ಕೋರಂಬಡ್ಕ, ತುಳುನಾಡ ದಿನಸಿ ಬಜಾರ್ ಜಾಲ್ಸೂರು ರೋಹಿತ್ ಬುಡ್ಲೆಗುತ್ತು, ಕ್ರೀಡಾ ಕಾರ್ಯದರ್ಶಿ ಅವಿನ್ ಮಳಿ, ಕ್ರೀಡಾಕೂಟ ಸಂಯೋಜಕ ಸತೀಶ್ ಬೊಮ್ಮೆಟ್ಟಿ ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಅಧ್ಯಕ್ಷರಾದ ಚಂದ್ರಶೇಖರ ನೆಡಿಲು ವಹಿಸಿದರು. ಮುಖ್ಯ ಅತಿಥಿಗಳಾಗಿ ನಮ್ಮೊಂದಿಗೆ  ವಸಂತ ಮಳಿ ಶ್ರೀ. ಆತ್ಮರಾಮ ಭಜನಾ ಮಂದಿರ ಇದರ ಅಧ್ಯಕ್ಷ ವಸಂತ ಮಳಿ, ಮುಖ್ಯ ಅತಿಥಿಗಳಾಗಿ ಯುವಕ ಮಂಡಲ(ರಿ) ಕನಕಮಜಲು ಇದರ ಗೌರವಾಧ್ಯಕ್ಷ ಬಾಲಚಂದ್ರ ನೆಡಿಲು,  ಅಶೋಕ್ ಕೋರಂಬಡ್ಕ ಆದಿತ್ಯ ಸೋಲಾರ್ ರಾಜ್ ಎಂಟರ್ ಪ್ರೈಸಸ್ ಸುಳ್ಯ ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಂದ್ಯಕೂಟದಲ್ಲಿ ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೇರಂ ಕಿಲಾಡಿಸ್ ಅಜ್ಜಾವರ ‘ಬಿ’, ದ್ವಿತೀಯ ಸ್ಥಾನವನ್ನು ಎಸ್ ಎಫ್ ಸಿ ಐವರ್ನಾಡು, ತೃತೀಯ ಸ್ಥಾನವನ್ನು ಕೇರಂ ಕಿಲಾಡಿಸ್ ಅಜ್ಜಾವರ ‘ಎ’ ಪಡೆದುಕೊಂಡರು. ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಂಗಾಧರ ಮಾಣಿಕೋಡಿ, ದ್ವಿತೀಯ ಸ್ಥಾನವನ್ನು ನವೀನ್ ಐವರ್ನಾಡು ಪಡೆದುಕೊಂಡರು. ವಿಜೇತರಿಗೆ ವಸಂತ ಮಳಿ ಮತ್ತು ಸತೀಶ್ ಬೊಮ್ಮೆಟ್ಟಿ ಬಹುಮಾನ ವಿತರಿಸಿದರು.
ಕಾರ್ಯಕ್ರಮವನ್ನು ಚಂದ್ರಶೇಖರ್ ಕುದ್ಕುಳಿ ನಿರೂಪಿಸಿ, ಚಂದ್ರಶೇಖರ ನೆಡಿಲು ಸ್ವಾಗತಿಸಿ, ಅಶ್ವಥ್ ಅಡ್ಕಾರ್ ವಂದಿಸಿದರು.

LEAVE A REPLY

Please enter your comment!
Please enter your name here