ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

0

ನೆಲ್ಲಿಕುಮೇರಿ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ 10ನೇ ವರ್ಷದ ನವರಾತ್ರಿ ಉತ್ಸವಕ್ಕೆ ಆಡಳಿತ ಸಮಿತಿ ಗೌರವಾಧ್ಯಕ್ಷ ರಾಜಾರಾಮ್ ಕೀಲಾರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.


ಆಡಳಿತ ಸಮಿತಿಯ ಮೊಕ್ತೇಸರ ಪಳನಿವೇಲು, ನಿಕಟ ಪೂರ್ವ ಅಧ್ಯಕ್ಷ ವಿ. ಜ್ಞಾನಶೀಲನ್, ಅಧ್ಯಕ್ಷ ರಮೇಶ್, ಸದಸ್ಯ ಸತೀಶ, ಶ್ರೀ ಮಹಾವಿಷ್ಣುಮೂರ್ತಿ ದೇವಳದ ಅಧ್ಯಕ್ಷ ಗ್ರಾ.ಪಂ. ಸದಸ್ಯ ಜಗದೀಶ್, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಉದ್ಯಮಿಗಳಾದ ಕಿಶೋರ್ ಕುಮಾರ್ ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.

ಸೆ. 26 ರಿಂದ ಅ. 04 ರ ವರೆಗೆ ವಿವಿಧ ವೈಧಿಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನವರಾತ್ರಿ ಉತ್ಸವವು ಜರಗಲಿರುವುದು ಎಂದು ಆಡಳಿತ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here