ತುಳು ಭಾಷೆಯ ಉಳಿವಿನಿಂದ ಸಂಸ್ಕೃತಿ‌ ಅರಳಲು ಸಾಧ್ಯ – ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಒಡಿಯೂರು ಶ್ರೀ

0

  • ನಮ್ಮ ತುಳು ಸಂಸ್ಕೃತಿಗೆ ಬಲಿಷ್ಠ ಅಡಿಪಾಯವಿದೆ:  ಪ್ರೊ. ಚಂದ್ರಪ್ರಭಾ ಆರ್. ಹೆಗ್ಡೆ
  • ತುಳು ಭಾಷೆ ದೇಶವ್ಯಾಪಿಯಾಗಲು ನಮ್ಮ ಪ್ರಯತ್ನ ಅಗತ್ಯವಿದೆ: ಡಾ. ಮಾಧವ  ಎಂ.ಕೆ
  • ತುಳುನಾಡಿನ ನಂಬಿಕೆಯನ್ನು‌ ನಾವು ಉಳಿಸಬೇಕು:  ದಯಾನಂದ ಕಟೀಲ್
ವಿಟ್ಲ: ತುಳುವರಲ್ಲಿ ಇಚ್ಚಾಶಕ್ತಿ ತುಂಬುವ ಕೆಲಸವಾಗಬೇಕು. ನಮ್ಮ ಭಾಷೆ ಸಂಸ್ಕೃತಿಯ ಬಗ್ಗೆ ನಾವು ಜಾಗೃತರಾಗಬೇಕು. ಬಹುಭಾಷಿಗರ‌ ನಡುವೆ ತುಳುವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ತುಳು ಭಾಷೆಯ ಉಳಿವಿನಿಂದ ಸಂಸ್ಕೃತಿ‌ ಅರಳಲು ಸಾಧ್ಯ. ನಿರಾಸೆ ಬಿಟ್ಟು  ತುಳು ಎಂಟನೇ ಪರಿಚ್ಚೇದಕ್ಕೆ ಸೇರುತ್ತದೆ ಎನ್ನುವ ವಿಶ್ವಾಸ ನಮ್ಮಲ್ಲಿರಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಫೆ.10ರಂದು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದ ಆತ್ರೇಯ ಮಂಟಪದಲ್ಲಿ ನಡೆದ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.


ಹುಟ್ಟು ಸಾವಿನ ಮಧ್ಯೆ ನಾವು ಮಾಡಿದ ಸಾಧನೆಯೇ ಶ್ರೇಷ್ಠವಾದದ್ದು. ಉಳಿವಿಗೆ ಸಹನೆ ಅಗತ್ಯ ಅದರೊಟ್ಟಿಗೆ ತ್ಯಾಗವೂ ಬೇಕು. ಸಮಯವನ್ನು ಸದುಪಯೋಗ ಪಡಿಸುವ ಮನಸ್ಸು ನಮ್ಮದಾಗಬೇಕು. ಸುಸಂಸ್ಕೃತ ಸಮಾಜ ನಿರ್ಮಾಣದ ಕಡೆ ನಮ್ಮ ಒಲವಿರಬೇಕು. ಸಾಧನೆ ಮಾಡದಿದ್ದರೆ ಸಾವಿಗೆ ಅವಮಾನ. ಸಾವಿನಲ್ಲಿ ಸಾರ್ಥಕ್ಯವನ್ನು ಪಡೆಯಲು  ಸಾಧನೆ ಮಾಡಬೇಕು. ಧೈರ್ಯವೆ ದೇವರು. ಬದುಕು ನೆರಳು ನೀಡುವ ಮರವಾಗಬೇಕು. ನಾನು ಎನ್ನುವುದನ್ನು ಬಿಟ್ಟು ನಾವು ಎನ್ನುವ ಭಾವನೆ ಇದ್ದರೆ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ‌. ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕು.  ಶಿಕ್ಷಣದಲ್ಲಿ ಬದಲಾವಣೆಯಾಗಬೇಕಾದ ಅನಿವಾರ್ಯತೆ ಇದೆ. ನಾವು ನಮ್ಮ ಕೆಲಸವನ್ನು ಕ್ರೀಯಾಶೀಲತೆಯಿಂದ ಮಾಡಬೇಕು ಎಂದರು.

ಶಿರ್ವ ನಿವೃತ್ತ ಪ್ರಾಂಶುಪಾಲೆ ಪ್ರೊ. ಚಂದ್ರಪ್ರಭಾ ಆರ್. ಹೆಗ್ಡೆ ರವರು ತುಳು ಸಾಹಿತ್ಯ ಸಮ್ಮೇಳನದ ತುಳು ತುಲಿಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತೀಯ ಸಂಸ್ಕೃತಿಗೆ ಅಂತ್ಯವಿಲ್ಲ. ಅವರರವರ ಸಂಸ್ಕೃತಿಗೆ ಅವರವರಿಗೆ ಚಂದ. ತುಳುವಿನ ಇತಿಹಾಸವನ್ನು‌ ಕಾಣುವಾಗ ಮನಸ್ಸು ತುಂಬಿ ಬರುತ್ತದೆ. ತುಳುವರಿಗೆ ತುಳುವಿನ ಬಗ್ಗೆ ಅಭಿಮಾನವಿದೆ. ಭಾರತದ ಸಂಸ್ಕೃತಿಯ ತಿರುಳು‌ ಆಧ್ಯಾತ್ಮ. ನಮ್ಮ ತುಳು ಸಂಸ್ಕೃತಿ ಭಲಿಷ್ಠ ಅಡಿಪಾಯವಿದೆ‌. ಭಾವನಾತ್ಮಕ ವಿಚಾರವನ್ನು ಸರಕಾರ‌ ಹಗುರವಾಗಿ ತೆಗೆದುಕೊಳ್ಳುತ್ತಿದೆ. ತುಳುವಿಗೆ ಬೇಕಾದಷ್ಟು ಅವಕಾಶಗಳಿವೆ.ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಸಂಶೋಧಕ ಡಾ. ಮಾಧವ  ಎಂ.ಕೆ.ರವರು ‘ಶಿಕ್ಷಣೊಡು ತುಳುಬಾಸೆ’ ವಿಚಾರವಾಗಿ ಮಾತನಾಡಿ  ಭಾಷೆ ದೇಶವ್ಯಾಪಿಯಾಗಲು ನಮ್ಮ ಪ್ರಯತ್ನ ಅಗತ್ಯವಿದೆ. ತುಳು ಬಾಷೆ ಸಂಸ್ಕೃತಿ ಶಿಕ್ಷಣದ ಮುಖೇನ ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು. ಶಾಲಾ ಕಾಲೇಜುಗಳಲ್ಲಿ ತುಳುವಿನ ಶಿಕ್ಷಣ ನೀಡುವ ಕೆಲಸವಾಗಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಜ್ಞಾನ ಭಂಡಾರ ಹೆಚ್ಚಾಗುವುದು.

ಮಂಗಳೂರಿನ ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲರಾದ ದಯಾನಂದ ಕಟೀಲ್ ರವರು ‘ಬಹುಸಂಸ್ಕೃತಿಡ್ ತುಳು ಸಂಸ್ಕೃತಿದ ಒರಿಪು’ ವಿಚಾರವಾಗಿ ಮಾತನಾಡಿ ತುಳುವರು ಶ್ರಮಜೀವಿಗಳು. ತುಳು ಉಳಿಯಬೇಕಾದರೆ ಸಂಸ್ಕೃತಿ ಉಳಿಯಬೇಕು. ತುಳು ಸಂಸ್ಕೃತಿಗೆ ಇಂದಿಗೂ ಮಾನ್ಯತೆ ಇದೆ. ತುಳುನಾಡಿನ ನಂಬಿಕೆಯನ್ನು‌ ನಾವು ಉಳಿಸಬೇಕು. ತುಳು ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸಬೇಕು ಎಂದರು.

ಒಡಿಯೂರು ತುಳುಕೂಟದ ವತಿಯಿಂದ ಒಡಿಯೂರು ಶ್ರೀಗಳವರನ್ನು ಗೌರವಿಸಲಾಯಿತು. ವಿಕುಭ ಹೆಬ್ಬಾರಬೈಲುರವರ ಈ ತಿಂಗಳ ಪೂವರಿ ಪತ್ರಿಕೆಯನ್ನು ಸ್ವಾಮೀಜಿ ಬಿಡುಗಡೆ ಮಾಡಿದರು.

ಸಾಧ್ವಿ ಶ್ರೀ ಮಾತಾನಂದಮಯೀರವರು ದಿವ್ಯ ಉಪಸ್ಥಿತರಿದ್ದರು. ಕ್ಯಾಂಪ್ಕೋ ನಿರ್ದೇಶಕ ಡಾ. ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಮುಂಬಯಿ ಸಮಿತಿ ಕಾರ್ಯದರ್ಶಿ ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ, ಥಾನೆ ಉದ್ಯಮಿ ಮೋಹನ ಹೆಗ್ಡೆ ಜೆಜ್ಜ, ವಾಮಯ್ಯ ಬಿ. ಶೆಟ್ಟಿ ಚೆಂಬೂರು, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಒಡಿಯೂರು ತುಳುಕೂಟದ ಅಧ್ಯಕ್ಷ ಯಶು ವಿಟ್ಲ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಕನ್ಯಾನ ಒಡಿಯೂರು ಶ್ರೀ ಗುರುದೇವ ಐ. ಟಿ. ಐ. ಪ್ರಾಂಶುಪಾಲ ಕರುಣಾಕರ ಎನ್. ಬಿ. ವಂದಿಸಿದರು. ಹರಿಣಾಕ್ಷಿ ಜೆ. ಶೆಟ್ಟಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here