ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿವೃತ್ತಿ ರಾಶಿಯಲ್ಲಿ ಸೀಮೆಯ ಭಕ್ತರ ಉಪಸ್ಥಿತಿಯಿರಬೇಕೆಂದು ದೈವಜ್ಞರ ಹೇಳಿಕೆ- ಕೇಶವಪ್ರಸಾದ್ ಮುಳಿಯ

0

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹೋತಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದ ದೋಷಗಳಿಗೆ ದೈವಜ್ಞರು ಸೂಚಿಸಿದ ಪರಿಹಾರಗಳ ಕುರಿತು ಫೆ. 11ರಂದು ನಿವೃತ್ತಿ ರಾಶಿ ನಡೆಯಲಿದ್ದು, ಅಷ್ಟಮಂಗಲ ಪರಿಹಾರ ‘ನಿವೃತ್ತಿ ನಿಧಿ’ ಸಂಚಯನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸೀಮೆಯ ಮತ್ತು ಹೊರಗಿನ ಭಕ್ತರೆಲ್ಲರು ಉಪಸ್ಥಿತರಬೇಕೆಂದು ದೈವಜ್ಞರು ಸೂಚಿಸಿದ್ದಾರೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

 


ಶ್ರೀ ದೇವಳದ ಸಭಾಭವನದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನಾಚಿಂತನೆಯ ಮಧ್ಯಾಹ್ನದ ಭೋಜನದ ವಿರಾಮದಲ್ಲಿ ಅವರು ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಇವತ್ತಿಗೆ ೨೧ ದಿನದ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಯುತ್ತಿದೆ. ೨೦೧೮ನೇ ಇಸವಿಯಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಶ್ರೀ ದೇವರ ಪುಷ್ಪಕನ್ನಡಿ ಭೂಸ್ಪರ್ಶವಾದ ವಿಚಾರಕ್ಕೆ ಸಂಬಂಧಿಸಿ ಪರಿಹಾರ ಕಾರ್ಯಕ್ಕೆ ಹಿಂದಿನ ವ್ಯವಸ್ಥಾಪನಾ ಸಮಿತಿ ತಾಂಬೂಲ ಪ್ರಶ್ನೆ ಮಾಡಿದಾಗ ಅಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಾಗಿ ತಿಳಿದು ಬಂತು. ಆ ಸಂದರ್ಭದಲ್ಲಿ ಅವರ ವ್ಯವಸ್ಥಾಪನಾ ಸಮಿತಿ ಕೊನೆಗೊಳ್ಳುವ ಹಂತದಲ್ಲಿದ್ದಾಗ ಮುಂದಿನ ವ್ಯವಸ್ಥಾಪನಾ ಸಮಿತಿ ಮಾಡುವ ಕುರಿತು ಕೋರಿಕೊಂಡ ಮೇರೆಗೆ ಈಗಿನ ವ್ಯವಸ್ಥಾಪನಾ ಸಮಿತಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸುತ್ತಿದೆ ಎಂದ ಅವರು ಇಲ್ಲಿ ಭೂ ಸ್ಪರ್ಶ ವಿಚಾರದ ಜೊತೆಗೆ ಪುತ್ತೂರು ಕ್ಷೇತ್ರ ಮಹಾಕ್ಷೇತ್ರವಾಗಿ ಅಭಿವೃದ್ಧಿ ಹೊಂದಲಿರುವ ಎಲ್ಲಾ ಅರ್ಹತೆಯನ್ನು ಹೊಂದಿದ್ದರೂ ಯಾವುದೋ ಒಂದು ಕಾರಣದಿಂದ ಆಗುತ್ತಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟು. ಕ್ಷೇತ್ರದ ಸಾನಿಧ್ಯ ವೃದ್ಧಿಗಾಗಿ ಈ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಯುತ್ತಿದೆ. ಬಹಳಷ್ಟು ವಿಚಾರಗಳನ್ನು ದೈವಜ್ಞರು ನುಡಿದಿದ್ದಾರೆ. ನಿವೃತ್ತಿಯ ರಾಶಿಯಲ್ಲಿ ಅದಕ್ಕೆಲ್ಲಾ ಪರಿಹಾರ ಸಿಗುತ್ತದೆ. ಲೋಪದೋಷಗಳ ಪರಿಹಾರಕ್ಕಾಗಿ ಫೆ. ೧೧ರಂದು ದೈವಜ್ಞರು ದೇವಳದ ವಿಚಾರವಾಗಿ ಏನೆಲ್ಲಾ ನಡೆಯಬೇಕೆಂದು ತಿಳಿಸಲಿದ್ದಾರೆ. ಈ ಸಂದರ್ಭದಲ್ಲಿ ಭಕ್ತರೆಲ್ಲರು ಉಪಸ್ಥಿಯಿರಬೇಕೆಂದು ದೈವಜ್ಞರ ಹೇಳಿಕೆಯಂತೆ ಈ ಪ್ರತ್ರಿಕಾಗೋಷ್ಠಿ ಮಾಡಿದ್ದೇವೆ ಎಂದರಲ್ಲದೆ ಮಧ್ಯಾಹ್ನ ಗಂಟೆ ೩ಕ್ಕೆ ನಿವೃತ್ತಿ ನಿಧಿ ಸಂಚಯನ ಕಾರ್ಯಕ್ರಮ ನಡೆಯಲಿದೆ. ಆರಂಭದಲ್ಲಿ ದೈವಜ್ಞರೇ ಅದಕ್ಕೆ ಚಾಲನೆ ನೀಡಲಿದ್ದಾರೆ. ಭಕ್ತರು ತನ್ನಿಂದಾತಂಹ ಕಿಂಚಿತ್ ಸೇವೆಯನ್ನು ಭಕ್ತರು ನಿಧಿ ಸಂಚಯನ ತಟ್ಟೆಗೆ ಹಾಕಿ ತಮ್ಮನ್ನು ದೇವರ ಸೇವೆಗೆ ಅರ್ಪಣೆ ಮಾಡುವ ಕಾರ್ಯಕ್ಕೆ ಸಹಕಾರ ನೀಡುವಂತೆ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ವೀಣಾ ಬಿ.ಕೆ, ರವಿಂದ್ರನಾಥ ರೈ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಪತ್ರಕರ್ತ ಬಿ.ಟಿ.ರಂಜನ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಪತ್ರಿಕಾಗೋಷ್ಠಿಯ ಆರಂಭದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ನಿಧಿಯನ್ನು ಪರಿಹಾರ, ಪೂಜೆಗೆ ಉಪಯೋಗ:
ನಿಧಿ ಸಂಚಯನಕ್ಕೆ ಸಂಬಂಧಿಸಿ ಪರಿಹಾರ ಕಾರ್ಯಕ್ಕೆ ಎಷ್ಟೋ ಮಂದಿ ಭಕ್ತರು ನಾನೊಬ್ಬನೆ ಕೊಡುತ್ತೇನೆ ಎಂದು ಮುಂದೆ ಬರುವವರಿದ್ದಾರೆ. ಆದರೆ ಅದು ಹಾಗೆ ಆಗಬಾರದು. ಎಲ್ಲಾ ಭಕ್ತರು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಮತ್ತು ಭಕ್ತರ ಒಂದು ರೂಪಾಯಿ ಆದರೂ ಸರಿ. ದೇವರಿಗೆ ಸಮರ್ಪಣೆ ಆಗಬೇಕು. ಹಾಗೆ ಸಂಗ್ರಹವಾದ ನಿಧಿಯಲ್ಲಿ ಪರಿಹಾರ ಕಾರ್ಯಕ್ಕೆ , ಪೂಜೆಗೆ ಬಳಸಲಾಗುವುದು. ನಿಧಿಯನ್ನು ನಮ್ಮ ಯಾವುದೇ ಪ್ರಯಾಣಕ್ಕೆ ಅದನ್ನು ವಿನಿಯೋಗಿಸುವುದಿಲ್ಲ. ನಾವು ನಮ್ಮ ಸ್ವಂತ ಖರ್ಚಿನಿಂದ ಪ್ರಯಾಣವನ್ನು ವಹಿಸಲಿದ್ದೇವೆ.
ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು

ಮಹಾಲಿಂಗೇಶ್ವರನ ಕೃಪೆಯಿಂದ ದೈವಸ್ವಂ ಯೋಜನೆಗೆ ಆಯ್ಕೆ:
ಕಾಶಿ ಮಾದರಿಯಲ್ಲಿ ರಾಜ್ಯದ ೨೫ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಯ ಪಟ್ಟಿಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರವು ಸೇರಿದೆ. ಇದು ಮಹಾಲಿಂಗೇಶ್ವರನ ಕೃಪೆ ಎಂಬಂತೆ ದೇವಸ್ಥಾನ ಮಹಾಯೋಜನೆಯ ಮೂಲಕ ಮಹಾಕ್ಷೇತ್ರವಾಗಿ ಅಭಿವೃದ್ಧಿಯಾಗಬೇಕೆಂಬ ಉದ್ದೇಶವಿತ್ತು. ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವು. ಆ ಮನವಿ ಪುರಸ್ಕೃತಗೊಂಡಿದೆ. ಮುಂದಿನ ದಿನ ಭಕ್ತರ ಸಹಕಾರ ಅಗತ್ಯ ಎಂದು ಕೇಶವಪ್ರಸಾದ್ ಮುಳಿಯ ತಿಳಿಸಿದರು.

LEAVE A REPLY

Please enter your comment!
Please enter your name here