ಮೊಬೈಲ್ ನ್ಯಾನೋ ಕೋಟಿಂಗ್, ಸಿಸಿ ಟಿವಿ ಸೆಕ್ಯೂರಿಟಿ ಸಿಸ್ಟಮ್ಸ್‌ನ ಮಳಿಗೆ ಶ್ರೀ ಆಲಡ್ಕ ಎಂಟರ್‌ಪ್ರೈಸಸ್ ತಿಂಗಳಾಡಿಯಲ್ಲಿ ಶುಭಾರಂಭ

0

  • ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕರವರಿಗೆ ಸನ್ಮಾನ- ಮನರಂಜಿಸಿದ ಸಾಂಸ್ಕೃತಿಕ ವೈಭವ

ಪುತ್ತೂರು: ಮೊಬೈಲ್ ಫೋನ್‌ಗಳಿಗೆ ವಾಟರ್ ಪ್ರೂಫಿಂಗ್ ತಂತ್ರಜ್ಞಾನದ ನ್ಯಾನೋ ಕೋಟಿಂಗ್ ಮತ್ತು ಸಿಸಿಟಿವಿ-ಸೆಕ್ಯೂರಿಟಿ ಸಿಸ್ಟಮ್ಸ್ ಸೇವೆಗಳನ್ನೊಳಗೊಂಡ ನೂತನ ಸಂಸ್ಥೆ ಶ್ರೀ ಆಲಡ್ಕ ಎಂಟರ್‌ಪ್ರೈಸಸ್ ಫೆ.೧೨ರಂದು ತಿಂಗಳಾಡಿಯಲ್ಲಿ ಕೆನರಾ ಬ್ಯಾಂಕ್ ಬಳಿಯ ಸೂರ್ಯೋದಯ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಸಂಸ್ಥೆಯನ್ನು ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿದರು. ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡಂಕಿರಿ ದೀಪ ಪ್ರಜ್ವಲನಗೊಳಿಸಿದರು.

ಹೊಸ ಅವಿಷ್ಕಾರಗಳು ಆಗಲಿ-ಬೂಡಿಯಾರ್
ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ಆಧುನಿಕ ಕಂಪ್ಯೂಟರ್ ಯುಗದಲ್ಲಿ ಜನರಿಗೆ ಬೇಕಾದ ವಿವಿಧ ತಂತ್ರಜ್ಞಾನಗಳ ಸಂಸ್ಥೆ ಇಲ್ಲಿ ಆರಂಭಗೊಂಡಿರುವುದು ಸಂತಸದ ವಿಚಾರ. ಹರ್ಷಿತ್ ರೈ ಅವರಿಂದ ಇನ್ನಷ್ಟು ಹೊಸ ಆವಿಷ್ಕಾರಗಳು, ಪ್ರಯೋಗಗಳು ಆಗಲಿ ಎಂದು ಹೇಳಿ ಶುಭ ಹಾರೈಸಿದರು.

ಯಶಸ್ಸಿನ ಪಥದಲ್ಲಿ ಸಾಗಲಿ-ಹೇಮನಾಥ ಶೆಟ್ಟಿ
ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಆಲಡ್ಕ ಎಂಟರ್‌ಪ್ರೈಸಸ್ ಜನರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಹೆಸರು ಪಡೆಯಲಿ, ಜಿಲ್ಲೆಯ ೫ ಕಡೆಗಳಲ್ಲಿ ಪ್ರಾರಂಭಗೊಳ್ಳಲಿರುವ ಈ ಸಂಸ್ಥೆಯು ದೇವರ ಅನುಗ್ರಹದಿಂದ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಅಭಿವೃದ್ಧಿಗೆ ಪೂರಕ-ರತನ್ ರೈ
ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ ಮೊಬೈಲ್ ನ್ಯಾನೋ ಕೋಟಿಂಗ್, ಸಿಸಿಟಿವಿ, ಸೆಕ್ಯೂರಿಟಿ ಸಿಸ್ಟಮ್ಸ್‌ನ ಸಂಸ್ಥೆ ಗ್ರಾಮೀಣ ಪ್ರದೇಶವಾಗಿರುವ ತಿಂಗಳಾಡಿಯಲ್ಲಿ ಆರಂಭಗೊಂಡಿರುವುದು ಈ ಭಾಗದ ಅಭಿವೃದ್ಧಿಗೆ ಪೂರಕವಾಗಿದ್ದು ಸಂಸ್ಥೆ ಯಶಸ್ಸಿನ ಉತ್ತುಂಗಕ್ಕೆ ಏರುವಂತಾಗಲಿ ಎಂದು ಹೇಳಿದರು.

ವೇದಿಕೆಯಲ್ಲಿ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಆಳ್ವ ಬೋಳೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡಂಕಿರಿ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಸೂರ್ಯೋದಯ ಕಾಂಪ್ಲೆಕ್ಸ್‌ನ ಮಾಲಕ ಸೂರ್ಯಪ್ರಸನ್ನ ರೈ ಉಪಸ್ಥಿತರಿದ್ದರು.

ಅಣ್ಣು ತಿಂಗಳಾಡಿ ಪ್ರಾರ್ಥಿಸಿದರು. ಮಾಲಕ ಹರ್ಷಿತ್ ರೈ ಅವರ ತಂದೆ ಮಹಾಬಲ ರೈ ಕುಕ್ಕುಂಜೋಡು ಸ್ವಾಗತಿಸಿದರು. ಸಿಬ್ಬಂದಿ ತುಷಾರ್ ಕೆ ವಂದಿಸಿದರು. ಮಾಲಕ ಹರ್ಷಿತ್ ರೈ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕರಿಗೆ ಸನ್ಮಾನ:
ಕೃಷಿ ಕ್ಷೇತ್ರದ ಸಾಧನೆಗಾಗಿ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಅಮೈ ಮಹಾಲಿಂಗ ನಾಯ್ಕ ಕೇಪು ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಮಾಲಾರ್ಪಣೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.

ಸಾಂಸ್ಕೃತಿಕ ವೈಭವ:
ಸಂಸ್ಥೆಯ ಉದ್ಘಾಟನೆ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧನಂಜಯ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸವಿ ಸಂಗೀತ್ ಪುತ್ತೂರುಸುಮಧುರ ಗೀತೆಗಳ ಗಾಯನ, ದ.ಕ ಜೂನಿಯರ್ ಶ್ರೇಯಾ ಘೋಷಾಲ್ ಎಂದೇ ಕರೆಯಲ್ಪಡುವ ಸವಿತಾ ಅವಿನಾಶ್ ಪುತ್ತೂರು ಇವರಿಂದ ಸುಗಮ ಸಂಗೀತ ನಡೆಯಿತು. ಕುಮಾರಿ ಆರಾಧ್ಯ ಮುಂಡೂರು, ಅಣ್ಣು ತಿಂಗಳಾಡಿ ಸಹ ಗಾಯಕರಾಗಿದ್ದರು. ಗಾಯಕ, ನಿರೂಪಕ ವಿನೋದ್ ಆಚಾರ್ಯ ಪುತ್ತೂರು ನಿರೂಪಣೆಯಲ್ಲಿ ಡ್ಯಾನ್ಸ್ ಧಮಾಕಾ ನಡೆಯಿತು. ನೂರಾರು ಮಂದಿ ಕಾರ್ಯಕ್ರಮ ವೀಕ್ಷಿಸಿದರು.

ಜಿಲ್ಲೆಯ ಅಧಿಕೃತ ವಿತರಕರು:
ನಮ್ಮ ಮಳಿಗೆಯಲ್ಲಿ ಮೊಬೈಲ್ ಫೋನ್‌ಗಳಿಗೆ ವಾಟರ್ ಪ್ರೂಫಿಂಗ್ ತಂತ್ರಜ್ಞಾನದ ನ್ಯಾನೋ ಕೋಟಿಂಗ್ ಮತ್ತು ಸಿಸಿಟಿವಿ-ಸೆಕ್ಯೂರಿಟಿ ಸಿಸ್ಟಮ್ಸ್ ಸೇವೆ, ಸಿಸಿ ಕ್ಯಾಮರಾ, ವಿಡಿಯೋ ಡೋರ್ ಫೋನ್ ಸೇಲ್ಸ್ ಮತ್ತು ಸರ್ವೀಸ್ ವ್ಯವಸ್ಥೆ ಲಭ್ಯವಿದೆ. ದ.ಕ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಮೂಡಬಿದ್ರೆ ವ್ಯಾಪ್ತಿಗೂ ಮೊಬೈಲ್ ನ್ಯಾನೋ ಕೋಟಿಂಗ್ ಯಂತ್ರಗಳ ವಿತರಣೆಗೆ ಶ್ರೀ ಆಲಡ್ಕ ಎಂಟರ್‌ಪ್ರೈಸಸ್ ಏಕೈಕ ಅಧಿಕೃತ ಮಳಿಗೆಯಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ:7019421625 ನಂಬರನ್ನು ಸಂಪರ್ಕಿಸಬಹುದಾಗಿದೆ ಹರ್ಷಿತ್ ರೈ, ಮಾಲಕರು

LEAVE A REPLY

Please enter your comment!
Please enter your name here