ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ನಾಳ, ಆತ್ಮಭೂಷಣ್, ಶೇಖ್ ಜೈನುದ್ದೀನ್, ಸಿದ್ಧೀಕ್ ನೀರಾಜೆ, ಭಾಸ್ಕರ ರೈ ಸೇರಿ 43 ನಾಮಪತ್ರ ಸಲ್ಲಿಕೆ

0

  • ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಜಗನ್ನಾಥ ಶೆಟ್ಟಿ ಬಾಳ ಅವಿರೋಧ ಆಯ್ಕೆ

ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ಫೆ.27ರಂದು ನಡೆಯುವ ಚುನಾವಣೆಗೆ ಒಟ್ಟು 43 ನಾಮಪತ್ರಗಳು ಸಲ್ಲಿಕೆಯಾಗಿವೆ.

ಸಂಘದ ಅಧ್ಯಕ್ಷ, ಕೋಶಾಧಿಕಾರಿ ಹಾಗು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಈ 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಪ್ರಧಾನ ಕಾರ್ಯದರ್ಶಿ ಒಂದು ಹುದ್ದೆಗೆ 2 ನಾಮಪತ್ರ, 3 ಉಪಾಧ್ಯಕ್ಷ ಸ್ಥಾನಕ್ಕೆ 6 ನಾಮಪತ್ರ, 3 ಕಾರ್ಯದರ್ಶಿ ಸ್ಥಾನಕ್ಕೆ 6 ನಾಮಪತ್ರ, 15 ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 26 ನಾಮಪತ್ರ ಸಲ್ಲಿಕೆಯಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿಕಾರಿ ಸ್ಥಾನಕ್ಕೆ ಬಿ.ಎನ್.ಪುಷ್ಪರಾಜ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಜಗನ್ನಾಥ ಶೆಟ್ಟಿ ಬಾಳ ನಾಮಪತ್ರ ಸಲ್ಲಿಸಿದ್ದಾರೆ.ಈ ಮೂರು ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಇವರು ಅವಿರೋಧ ಆಯ್ಕೆಯಾಗಿದ್ದು ಅಧಿಕೃತ ಘೋಷಣೆ ಆಗಬೇಕಿದೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ರಾಹಿಂ ಅಡ್ಕಸ್ಥಳ ಮತ್ತು ಜಿತೇಂದ್ರ ಕುಂದೇಶ್ವರ ನಾಮಪತ್ರ ಸಲ್ಲಿಸಿದ್ಸಾರೆ.ಉಪಾಧ್ಯಕ್ಷ ಸ್ಥಾನಕ್ಕೆ ಆರ್.ಸಿ.ಭಟ್, ಹರೀಶ್ ಮಾಂಬಾಡಿ, ರಾಜೇಶ್ ಪೂಜಾರಿ, ಸುದ್ದಿ ಬಿಡುಗಡೆ ಮಂಗಳೂರು ವರದಿಗಾರ ಭಾಸ್ಕರ ರೈ ಕಟ್ಟ, ಆತ್ಮಭೂಷಣ್ ಭಟ್, ಅನ್ಸಾರ್ ಇನೋಳಿ ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಸುದ್ದಿ ಬಿಡುಗಡೆ ಉಪ್ಪಿನಂಗಡಿ ವರದಿಗಾರ ಸಿದ್ಧೀಕ್ ನೀರಾಜೆ, ಗಂಗಾಧರ ಕಲ್ಲಪಳ್ಳಿ, ವಿಜಯ್ ಕೋಟ್ಯಾನ್ ಪಡು, ಹರೀಶ್ ಮೋಟುಕಾನ, ಭುವನೇಶ್ ಗೇರುಕಟ್ಟೆ, ಶರತ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ.ಕಾರ್ಯಕಾರಿ ಸಮಿತಿ ಸದಸ್ಯರ 15 ಸ್ಥಾನಕ್ಕೆ 26 ನಾಮಪತ್ರ ಸಲ್ಲಿಕೆಯಾಗಿದೆ.ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಶೇಖ್ ಜೈನುದ್ದೀನ್, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಅಶೋಕ್ ಶೆಟ್ಟಿ ಬಿ.ಎನ್.,ರಾಜೇಶ್ ದಡ್ಡಂಗಡಿ, ಸತೀಶ್ ಇರಾ, ಲೋಕೇಶ್ ಪೆರ್ಲಂಪಾಡಿ, ಹಿಲರಿ ಕ್ರಾಸ್ತಾ ಪಿ, ರಾಜೇಶ್ ಶೆಟ್ಟಿ, ಮೋಹನ್ ಕುತ್ತಾರ್, ಭರತ್‌ರಾಜ್, ಸತ್ಯವತಿ, ನರೇಂದ್ರ ಕೆರೆಕಾಡು, ನಿಶಾಂತ್ ಶೆಟ್ಟಿ ಕಿಲೆಂಬೂರು, ನವೀನ್ ಕುಮಾರ್ ಶೆಟ್ಟಿ, ಸಂದೇಶ್ ಜಾರ, ಮಹಮ್ಮದ್ ಆರಿಫ್ ಪಡುಬಿದ್ರೆ, ವೇಣುಗೋಪಾಲ ಮೂಡಬಿದ್ರೆ, ದೇವಿಪ್ರಸಾದ್ ಬೆಳ್ತಂಗಡಿ, ಚೈತ್ರೇಶ್ ಇಳಂತಿಲ, ಸುಖ್‌ಪಾಲ್ ಪೊಳಲಿ, ಶಶಿಧರ ಬಂಗೇರ, ವಿಲ್ಪ್ರೆಡ್ ಡಿಸೋಜ, ಗಿರೀಶ್ ಅಡ್ಪಂಗಾಯ ಸುಳ್ಯ, ವಿದ್ಯಾಧರ ಶೆಟ್ಟಿ, ಹರೀಶ್ ಕುಲ್ಕುಂದ, ವಿನಯಕೃಷ್ಣ ಪಿ ನಾಮಪತ್ರ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here