ಉರ್ಲಾಂಡಿ ಶ್ರೀಸತ್ಯನಾರಾಯಣ ಕಟ್ಟೆಯಲ್ಲಿ ಆಶ್ಲೇಷ ಬಲಿ, ಅನುಜ್ಞ ಕಲಶ

0

 

ಪುತ್ತೂರು: ಉರ್ಲಾಂಡಿ ಸಾರ್ವಜನಿಕ ಶ್ರೀಸತ್ಯನಾರಾಯಣ ಸೇವಾ ಸಮಿತಿ ವತಿಯಿಂದ ಉರ್ಲಾಂಡಿ ಶ್ರೀಸತ್ಯನಾರಾಯಣ ಕಟ್ಟೆಯಲ್ಲಿ ನಡೆಯಲಿರುವ ಸತ್ಯನಾರಾಯಣ ಪೂಜೆಯು 50ನೇ ಸುವರ್ಣ ಸಂಭ್ರಮದಲ್ಲಿದ್ದು ಈ ನಿಟ್ಟಿನಲ್ಲಿ ಕಟ್ಟೆಯ ಜೀರ್ಣೋದ್ಧಾರದ ಪ್ರಯುಕ್ತ ಫೆ.12ರಂದು ರಾತ್ರಿ ಆಶ್ಲೇಷ ಬಲಿ ಹಾಗೂ ಫೆ.13ರಂದು ಬೆಳಿಗ್ಗೆ ಕೆಮ್ಮಿಂಜೆ ಲಕ್ಷೀಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞ ಕಲಶ ನಡೆಯಿತು.

ಸಮಿತಿಯ ಗೌರವಾಧ್ಯಕ್ಷ ಎ.ಜೆ. ನಾಕ್, ಅಧ್ಯಕ್ಷ ನಡುಸಾರ್ ಶಿವಭಟ್, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಲೆ, ಕೋಶಾಧಿಕಾರಿ ಪುರುಷೋತ್ತಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ್ ಗೌಡ, ಕಾರ್ಯದರ್ಶಿ ಪುಷ್ಪರಾಜ್ ಹೆಗ್ಡೆ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಅನಿಲ್ ಉರ್ಲಾಂಡಿ, ರಮೇಶ್ ಗೌಡ, ಮೋಹನ್ ನಾಯರ್, ಜನಾರ್ಧನ ಗೌಡ, ಯೋಗಾನಂದ ರಾವ್, ಪ್ರವೀಣ್ ಹೆಗ್ಡೆ, ಅಣ್ಣು, ರಮೇಶ್ ನಾಯರಡ್ಕ, ಮಹೇಶ್ ಭಂಡಾರಿ, ಸತ್ಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here