ಇತಿಹಾಸ ತಜ್ಞ, ವಿದ್ವಾಂಸರಾದ ಬಾಬುಶಿವ ಪೂಜಾರಿ ಗೆಜ್ಜೆಗಿರಿಗೆ ಭೇಟಿ

0

ಪುತ್ತೂರು: ಇತಿಹಾಸ ತಜ್ಞ, ವಿದ್ವಾಂಸ ಹಾಗೂ ಸಂಶೋಧಕರಾದ ಬಾಬುಶಿವ ಪೂಜಾರಿಯವರು ಗೆಜ್ಜೆಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಗರಡಿ, ಗುತ್ತು ಮನೆತನ ಬರ್ಕೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿ, ಹಲವಾರು ಕೃತಿಗಳನ್ನು ರಚನೆ ಮಾಡಿದ್ದಾರೆ. ಬ್ರಹ್ಮ ಶ್ರೀ ನಾರಾಯಣ ಗುರುಗಳ ಶ್ರೀ ನಾರಾಯಣ ಗುರು ವಿಜಯದರ್ಶನದ ಲೇಖಕರಾದ ಇವರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಹಾ ಅನ್ನದಾನ ಸೇವೆಗೆ ತಮ್ಮ ಕಾಣಿಕೆಯನ್ನು ಸಲ್ಲಿಸಿದರು. ಪ್ರತೀ ವರ್ಷ ಮುಂಬಯಿನಿಂದ ‍ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇವರಿಗೆ ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಗೌರವಿಸಿದರು.

LEAVE A REPLY

Please enter your comment!
Please enter your name here