ಸಂಪ್ಯ: ಉದಯಗಿರಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ರಥೋತ್ಸವ, ದರ್ಶನ ಬಲಿ

0


ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿಯಲ್ಲಿರುವ ಶ್ರೀ ವಿಷ್ಣಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವರ ಜಾತ್ರೋತ್ಸವ ಫೆ. 19ರಂದು ರಥೋತ್ಸವ, ದರ್ಶನ ಬಲಿ ಉತ್ಸವೊಂದಿಗೆ ಸಂಪನ್ನಗೊಂಡಿತ್ತು.

ಫೆ.19ರಂದು ಬೆಳಿಗ್ಗೆ ಉತ್ಸವ ಬಲಿ, ಪಲ್ಲಕಿ ಸುತ್ತು, ರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ದೇವಸ್ಥಾನದ ಧರ್ಮದರ್ಶಿ ತಂತ್ರಿಯೂ ಆಗಿರುವ ಕೆ.ಪ್ರೀತಂ ಪುತ್ತೂರಾಯ ಅವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಸಂಪ್ಯ ಒತ್ತೆಕೋಲ ಸಮಿತಿಯ ಮಂಜಪ್ಪ ರೈ ಬಾರಿಕೆ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಪುರಸಭಾಧ್ಯಕ್ಷರಾದ ರಾಜೇಶ್ ಬನ್ನೂರು, ಪ್ರೇಮಲತಾ ಟಿ ರಾವ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾದ್ಯಕ್ಷ ಅರುಣ್ ಕುಮಾರ್ ಪುತ್ತಿಲ, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಮಹಾಬಲ ರೈ ವಳತ್ತಡ್ಕ, ಸೀತಾರಾಮ ರೈ ಕಂಬಳತಡ್ಡ, ಜಯರಾಮ ರೈ, ಬಾಲಕೃಷ್ಣ ರೈ ಕುಕ್ಕಾಡಿ, ವಿದ್ವಾನ್ ನಯನಾ ವಿ ರೈ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here