ಬೆಟ್ಟಂಪಾಡಿ ದೇವಾಲಯದ ವೆಬ್‌ಸೈಟ್ ಅನಾವರಣ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧಿಕೃತ ವೆಬ್‌ಸೈಟ್‌ (www.bettampadytemple.org) ನ್ನು ಫೆ. 22 ರಂದು ದೇವಳದ ಪ್ರತಿಷ್ಠಾ ಮಹೋತ್ಸವದ ದಿನ ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿಯವರು ಅನಾವರಗೊಳಿಸಿದರು. ‘ವಿಶ್ವದಾದ್ಯಂತ ಬೆಟ್ಟಂಪಾಡಿ ದೇವಾಲಯದ ಚರಿತ್ರೆ ಮತ್ತು ಸೇವೆಗಳ ವಿವರ ದೊರಕುವುದರಿಂದ ಪರವೂರಲ್ಲಿರುವ ಭಕ್ತರಿಗೂ ವಿಶೇಷ ಸೇವೆ, ಪೂಜೆ ಮಾಡಿ ದೇವರ ಅನುಗ್ರಹಕ್ಕೆ ಪಾತ್ರರಾಗುವ ಅವಕಾಶ ಇದರಿಂದ‌ ದೊರೆಯಲಿದೆ. ಇದರ ಪೂರ್ಣ ಸದುಪಯೋಗ ಆಗಲಿ’ ಎಂದು ಅವರು ಶುಭ ನುಡಿಗಳನ್ನಾಡಿದರು.

 


‘ಟೆಕ್ನಿಕಲ್ ಡೊಮೈನ್’ ವೆಬ್ ಡೆವಲಪರ್ ರಜತ್ ಬಲ್ಲಾಳ್ ರವರು ಈ ವೆಬ್‌ಸೈಟ್ ವಿನ್ಯಾಸಗೊಳಿಸಿದ್ದು ಇದರಲ್ಲಿ ದೇವಳದ ಚರಿತ್ರೆ, ಸೇವೆಗಳು, ಫೊಟೋ ಗ್ಯಾಲರಿ, ಆಡಳಿತ ಮಂಡಳಿ ಇತ್ಯಾದಿ ವಿವರಗಳನ್ನು ಅಪ್‌ಲೋಡ್ ಮಾಡಲಾಗಿದೆ. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಅಭಿವೃದ್ಧಿ ಸಮಿತಿಯ ಸಂಚಾಲಕ ವೇ.ಮೂ.‌ ದಿನೇಶ್ ಮರಡಿತ್ತಾಯ, ಶಿವಕುಮಾರ್ ಬಲ್ಲಾಳ್ ಹಾಗೂ ಭಕ್ತಾಭಿಮಾನಿಗಳು ಈ ವೇಳೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here