ಜಯನಗರ: ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕಿನಿಂದ ಬಾರಿ ನೀರು ಪೋಲು, ಸಾರ್ವಜನಿಕರಿಂದ ಆಕ್ರೋಶ

0

 

ಸುಳ್ಯ ಜಯನಗರ ನಗರ ಪಂಚಾಯತ್ ಕುಡಿಯುವ ನೀರಿನ ಟ್ಯಾಂಕ್ ತುಂಬಿ ಕಳೆದ ಎರಡು ದಿನಗಳಿಂದ ರಾತ್ರಿ ಸಮಯದಲ್ಲಿ ಸುಮಾರು ಮೂರು ನಾಲ್ಕು ಗಂಟೆ ನಿರಂತರ ನೀರು ಪೋಲಾಗುತ್ತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಳೆದ ಎರಡು ದಿನಗಳು ಸಂಜೆ 7 ಗಂಟೆ ಸಮಯದಿಂದ ನೀರಿನ ಟ್ಯಾಂಕ್ ತುಂಬಿ ಹಿಂದೂ ರುದ್ರಭೂಮಿಗೆ ಸಂಪರ್ಕಿಸುವ ರಸ್ತೆಯಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಇಷ್ಟೊಂದು ನೀರು ಪೋಲಾಗುತ್ತಿದ್ದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸುವುದಿಲ್ಲವೆಂದು ಸ್ಥಳೀಯರು ದೂರುತ್ತಿದ್ದಾರೆ.

 

LEAVE A REPLY

Please enter your comment!
Please enter your name here