ಸುಳ್ಯ ದಸರಾ ಉತ್ಸವ

0

 

ಗ್ಯಾರೇಜ್ ಉದ್ಯಮಿ ಭಾಸ್ಕರ ಗೌಡ ಐಡಿಯಲ್ ಮತ್ತು ಯುವ ಕಲಾವಿದ ಶಶಿ ಅಡ್ಕಾರ್ ರವರಿಗೆ ಸನ್ಮಾನ

ಜನ ಮನಸೂರೆಗೊಂಡ
ಫ್ರೆಂಡ್ಸ್ ಮ್ಯೂಸಿಕಲ್ಸ್ ರವರ ಸಂಗೀತ ರಸಮಂಜರಿ

ಶ್ರೀ ಶಾರದಾಂಬಾ ಸೇವಾ ಟ್ರಸ್ಟ್ ,ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ,ದಸರಾ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ ದಸರಾ ಉತ್ಸವದ 3 ನೇಯ ದಿನದಂದು ಹಿರಿಯ ಸಾಧಕ ಹಾಗೂ ಯುವ ಕಲಾವಿದರನ್ನು ಸನ್ಮಾನಿಸುವ ಸಮಾರಂಭವು ಎಸ್.6 ಅಧ್ಯಕ್ಷ ಚಿದಾನಂದ ವಿದ್ಯಾನಗರ ರವರ ಅಧ್ಯಕ್ಷತೆಯಲ್ಲಿ ಅ.4 ರಂದು ಶಾರದಾಂಬಾ ಕಲಾ ವೇದಿಕೆಯಲ್ಲಿ ಜರುಗಿತು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಡಾ.ಗಿರೀಶ್ ಭಾರದ್ವಾಜ್ ರವರು ಗ್ಯಾರೇಜ್ ಉದ್ಯಮದಲ್ಲಿ 50 ವರ್ಷ ಪೂರೈಸಿ ಯಶಸ್ಸು ಕಂಡ ಶ್ರಮಿಕ ‌ಭಾಸ್ಕರ ಗೌಡ ಐಡಿಯಲ್ ರವರನ್ನು ಹಾಗೂ ಅಶ್ವಥದ ಎಲೆಯಲ್ಲಿ ಪಡಿಯಚ್ಚು ಬರೆದು ಪ್ರಧಾನ ಮಂತ್ರಿ ಯವರಿಂದ ಪ್ರಶಂಸೆಗೆ ಪಾತ್ರರಾಗಿರುವ ಯುವ ಕಲಾವಿದ ಶಶಿ‌ ಅಡ್ಕಾರ್ ರವರನ್ನು ಜಂಟಿ ಸಮಿತಿಗಳ ಪರವಾಗಿ ಸನ್ಮಾನಿಸಿದರು. ವೇದಿಕೆಯಲ್ಲಿ ಯುವ ಉದ್ಯಮಿ ಕಮಿಲ ಕೆಮಿಕಲ್ಸ್ ಇಂಡಸ್ಟ್ರೀಸ್ ಮಾಲಕ ಸುರೇಶ್ ಕಮಿಲ, ಸಮಿತಿ ನಿರ್ದೇಶಕ ಹರೀಶ್ ರೈ ಉಬರಡ್ಕ, ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ, ಸಮಿತಿಯ ಟ್ರಸ್ಟಿನ‌ ಉಪಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.
ಎಸ್.6 ಅಧ್ಯಕ್ಷ ಚಿದಾನಂದ ವಿದ್ಯಾನಗರ ಅಭಿನಂದನಾ ಭಾಷಣ ಮಾಡಿದರು. ಬೂಡು ರಾಧಾಕೃಷ್ಣ ರೈ ಸ್ವಾಗತಿಸಿದರು. ನಾರಾಯಣ ಕೇಕಡ್ಕ ವಂದಿಸಿದರು. ಸುದ್ದಿ ‌ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಂಟಿ‌ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ಸಮಾರಂಭದ ಬಳಿಕ ಫ್ರೆಂಡ್ಸ್ ಮ್ಯೂಸಿಕಲ್ಸ್ ಸ್ಥಳೀಯ ಯುವ ಕಲಾವಿದರ ಬಳಗದ ವತಿಯಿಂದ ಅದ್ಧೂರಿಯಾಗಿ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮ ಜನಮನಸೂರೆಗೊಂಡಿತು.

LEAVE A REPLY

Please enter your comment!
Please enter your name here