ಪೆರುವಾಜೆ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ

0

ಲೋಕ ಸಭಾ ಸದಸ್ಯ ,ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ಅ.05 ರಂದು ಭೇಟಿ ನೀಡಿದರು. ವಿಜಯ ದಶಮಿ ದಿನದಂದು ಅವರು ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಬಿಜೆಪಿ ಮಂಡಲ‌ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸಮಿತಿ ಸದಸ್ಯರಾದ ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪಾಡಿ ,ಜಗನ್ನಾಥ ರೈ, ಶ್ರೀಮತಿ ಭಾಗ್ಯಲಕ್ಷೀ ,ಯಶೋಧ ಎನಡ್ಕ, ವೆಂಕಟಕೃಷ್ಣ ರಾವ್, ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಶ್ರೀನಾಥ್ ರೈ ಬಾಳಿಲ, ಸುಧಾಕರ ಕುಂಜಾಡಿ, ಜಗದೀಶ್ ಅಧಿಕಾರಿ, ಸಂತೋಷ್ ರೈ ಕಾಪು, ಕುಶಾಲಪ್ಪ ಪೆರುವಾಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here