ಇಂದಿನಿಂದ ನಾಲ್ಕು ದಿನ ದರ್ಬೆಯಲ್ಲಿ ‘ಟ್ರಿಯೋ ಫೆಸ್ಟ್’: ಪ್ರತಿಷ್ಟಿತ ಕಂಪೆನಿಗಳ ಲೈಟ್ಸ್, ಫ್ಯಾನ್ಸ್, ಇನ್‌ವರ್ಟರ್ ಪ್ರದರ್ಶನ, ಮಾರಾಟ:

0

ಪುತ್ತೂರು: ಪ್ರತಿಷ್ಟಿತ ಕಂಪೆನಿಗಳ ಎಲೆಕ್ಟ್ರಿಕಲ್ ಉಪಕರಣಗಳ ಕ್ವಾಲಿಟಿಯ ಕುರಿತು ಸಲಹೆ ಮತ್ತು ಮಾರಾಟದಲ್ಲಿ ಪ್ರಮುಖ ಪಾತ್ರವಹಿಸಿ ಗುಣಮಟ್ಟದ ಸೇವೆ ನೀಡುತ್ತಿರುವ ಪುತ್ತೂರಿನ ದರ್ಬೆಯಲ್ಲಿರುವ ಸೌತ್ ಕೆನರಾ ಡಾಟ್ ಕಾಮ್ ಇದರ ಆಶ್ರಯದಲ್ಲಿ ಫೆ.೨೮ರಿಂದ ಮಾ.೩ರ ತನಕ ಪ್ರತಿಷ್ಠಿಕ ಕಂಪೆನಿಗಳ ಲೈಟ್ಸ್, ಫ್ಯಾನ್ಸ್, ಇನ್‌ವರ್ಟರ್‌ಗಳ ಟ್ರಿಯೋ ಫೆಸ್ಟ್ ಪುತ್ತೂರು ದರ್ಬೆ ಸಂತ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿ ಜರುಗಲಿದೆ.

ಪ್ರಸಿದ್ಧ ಎಲೆಕ್ಟ್ರಿಕ್ ಕಂಪೆನಿಗಳನ್ನೂ ಒಂದು ಸೂರಿನಡಿಯಲ್ಲೇ ಸಿಗುವಂತೆ ಮೇಳದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕ್ರಾಂಪ್ಟನ್, ಫಿಲಿಪ್ಸ್, ಆಂಬರ್ಗ್, ಸ್ಮಾರ್ಟನ್ ಸೇರಿದಂತೆ ಹಲವು ಕಂಪೆನಿಗಳ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಜೊತೆಗೆ ಈ ಎಲ್ಲಾ ಸೇವೆಗಳು ಪಶುಪತಿ ಎಂಬ ಹೆಸರಿನಡಿಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಪಶುಪತಿ ಶರ್ಮ ಅವರು ತಿಳಿಸಿದ್ದಾರೆ.


ಲಕ್ಕಿ ಡ್ರಾ ಅವಕಾಶ: ನಾಲ್ಕು ದಿನ ನಡೆಯುವ ಟ್ರಿಯೋ ಫೆಸ್ಟ್ ಕಾರ್ಯಕ್ರಮದಲ್ಲಿ ಎಲೆಕ್ಟ್ರಿಕ್ ಉಪಕರಣಗಳ ಪ್ರದರ್ಶನಕ್ಕೆ ಆಗಮಿಸಿದ ಗ್ರಾಹಕರು ಸಾರ್ವಜನಿಕರಿಗೆ ಬಿಎಲ್‌ಡಿಸಿ ಫ್ಯಾನ್ ಗೆಲ್ಲುವ ಅವಕಾಶವಿದೆ. ಪ್ರದರ್ಶನ ನೋಡಲು ಬಂದವರು ಕೂಪನ್ ಭರ್ತಿ ಮಾಡಿ ಲಕ್ಕಿ ಡ್ರಾದಲ್ಲಿ ವಿಜೇತರಾಗಿ ಎಂದು ಸೌತ್ ಕೆನರಾ ಸಂಸ್ಥೆ ವಿನಂತಿಸಿದೆ.

ಪ್ರತಿಷ್ಠಿತ ಕಂಪೆನಿಗಳ ಲೀಥಿಯಮ್ ಇನ್ವರ್ಟರ್, ೨೮ವ್ಯಾಟ್ ಬಿಎಲ್‌ಡಿಸಿ, ಫಿಲಿಫ್ಸ್ ಎಕ್ಸಾವನ್‌ಪೆನಲ್, ಟ್ವಿಂಗ್‌ಲೋ ಟ್ಯೂಬ್‌ಲೈಟ್, ಅಟೋಕಲರ್ ಬಲ್ಬ್, ವೈಫೈ ಬಲ್ಬ್, ಸೋಲಾರ್ ಬೀದಿದೀಪಗಳು ಪ್ರದರ್ಶನದಲ್ಲಿವೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here