ನೆಲ್ಯಾಡಿ: ಲೀಜನ್‌ಗೆ ಸೀನಿಯರ್ ಛೇಂಬರ್ ರಾಷ್ಟ್ರೀಯ ಅಧ್ಯಕ್ಷ ಡಾ.ಅರವಿಂದ ರಾವ್ ಕೇದಿಗೆ ಭೇಟಿ, ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ

0

ನೆಲ್ಯಾಡಿ: ಸೀನಿಯರ್ ಛೇಂಬರ್ ರಾಷ್ಟ್ರೀಯ ಅಧ್ಯಕ್ಷ ಡಾ.ಅರವಿಂದ ರಾವ್ ಕೇದಿಗೆಯವರು ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್‌ಗೆ ಅಧಿಕೃತ ಭೇಟಿ ಹಾಗೂ ಸೀನಿಯರ್ ಛೇಂಬರ್ ವತಿಯಿಂದ ನೆಲ್ಯಾಡಿ ಗಾಂಧಿಮೈದಾನದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ ಫೆ.15ರಂದು ನಡೆಯಿತು.

ಟ್ಯಾಂಕ್ ಉದ್ಘಾಟನೆ ಬಳಿಕ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೀನಿಯರ್ ಛೇಂಬರ್ ರಾಷ್ಟ್ರೀಯ ಅಧ್ಯಕ್ಷ ಡಾ.ಅರವಿಂದ ರಾವ್ ಕೇದಿಗೆಯವರು, ೪೦ ವರ್ಷ ವಯೋಮಾನ ದಾಟಿದ ಜೇಸಿಗಳಿಗೆ ತನ್ನ ಅನುಭವಗಳನ್ನು ಸಮಾಜಮುಖಿ ಕಾರ್ಯಗಳಿಗೆ ಧಾರೆಯೆರೆಯಲು, ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಲು ಇಂಟರ್‌ನ್ಯಾಷನಲ್ ಸೀನಿಯರ್ ಛೇಂಬರ್ ವೇದಿಕೆ ಕಲ್ಪಿಸಿಕೊಟ್ಟಿದೆ. ೨೦೧೫-೧೬ರಲ್ಲಿ ಸೀನಿಯರ್ ಛೇಂಬರ್ ಕರ್ನಾಟಕದಲ್ಲಿ ಮಂಗಳೂರಿನಲ್ಲಿ ಪ್ರಥಮವಾಗಿ ಆರಂಭಗೊಂಡಿತು. ನಂತರ ಹಂತ ಹಂತವಾಗಿ ಆರಂಭಗೊಂಡು ಈಗ ಕರ್ನಾಟಕದಲ್ಲಿ ಒಟ್ಟು ೩೭ ಘಟಕಗಳು ಇವೆ ಎಂದರು. ರಾಷ್ಟ್ರೀಯ ನಿರ್ದೇಶಕ ಚಿತ್ರಕುಮಾರ್ ಮಾತನಾಡಿ, ನೆಲ್ಯಾಡಿ ಲೀಜನ್ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂಟರ್‌ನ್ಯಾಷನಲ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ಅಧ್ಯಕ್ಷ ಡಾ.ಸದಾನಂದ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಲೀಜನ್ ಸ್ಥಾಪಕ ಅಧ್ಯಕ್ಷ ಅಬ್ರಹಾಂ ವರ್ಗೀಸ್‌ರವರು ರಾಷ್ಟ್ರಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ನಾರಾಯಣ ಬಲ್ಯರವರು ಸೀನಿಯರ್ ವಾಣಿ ವಾಚಿಸಿದರು. ಕಾರ್ಯದರ್ಶಿ ಪ್ರಶಾಂತ್ ಸಿ.ಹೆಚ್.ವಂದಿಸಿದರು. ರವೀಂದ್ರ ಟಿ.,ವೇದಿಕೆಗೆ ಆಹ್ವಾನಿಸಿದರು.

ಸನ್ಮಾನ:
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಧವ ಗೌಡ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸುನಂದಾ, ಸೀನಿಯರ್ ಛೇಂಬರ್‌ನ ರಾಷ್ಟ್ರೀಯ ಅಧ್ಯಕ್ಷ ಡಾ.ಅರವಿಂದ ರಾವ್ ಕೇದಿಗೆ, ರಾಷ್ಟ್ರೀಯ ನಿರ್ದೇಶಕ ಚಿತ್ರಕುಮಾರ್‌ರವರನ್ನು ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಯೋಜನಾ ನಿರ್ದೇಶಕ ಜಯಾನಂದ ಬಂಟ್ರಿಯಾಲ್‌ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೆಲ್ಯಾಡಿ ಲೀಜನ್‌ನ ಸ್ಥಾಪಕ ಅಧ್ಯಕ್ಷ, ಹಾಲಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸದಸ್ಯರಿಗೆ ವಿಶೇಷ ಪಿನ್ ನೀಡಿ ರಾಷ್ಟ್ರಾಧ್ಯಕ್ಷರು ಭೇಟಿಯ ನೆನಪಿಗಾಗಿ ಗೌರವಿಸಿದರು.

LEAVE A REPLY

Please enter your comment!
Please enter your name here