ಮಕ್ಕಳಲ್ಲಿ ಶಿವನ ಚಿಂತನೆ ಬೆಳೆಸುವ ಕಾರ್ಯಕ್ರಮ ಯಶಸ್ವಿ – ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಛದ್ಮವೇಷ ಸ್ಪರ್ಧೆ ಉದ್ಘಾಟಿಸಿದ ಸ್ವಣೋದ್ಯಮಿ ಬಲರಾಮ ಆಚಾರ್ಯ

0


ಪುತ್ತೂರು: ನಮ್ಮ ಕಲೆಗಳಲ್ಲಿ ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಚಿಂತನೆಗಳು ಬೆಳೆಯಲು ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ಛದ್ಮವೇಷ ಸ್ಪರ್ಧೆ ಅಗತ್ಯ. ಇದು ಮಕ್ಕಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಧಾರ್ಮಿಕ ಪ್ರಜ್ಞೆ ಬೆಳೆಸುತ್ತದೆ ಎಂದು ಸ್ವರ್ಣೋದ್ಯಮಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನ ಮಾಲಕ ಬಲರಾಮ ಆಚಾರ್ಯ ಅವರು ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ದೇವಳದ ಎದುರು ಬದಿಯ ಹಿಮಗಿರಿ ವೇದಿಕೆಯಲ್ಲಿ ನಡೆದ ಛದ್ಮವೇಷ ಸ್ಪರ್ಧೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಭರತನಾಟ್ಯ. ಯಕ್ಷಗಾನ, ಗಾಯನದ ಮೂಲಕ ನಮ್ಮ ನಮ್ಮ ಪುರಾಣಗಳನ್ನು ದೇವರ ಬಗ್ಗೆ ತಿಳಿದು ಕೊಳ್ಳಬಹುದು. ಸಣ್ಣ ಮಕ್ಕಳಿಗೂ ಛದ್ಮವೇಷ ಸ್ಪರ್ಧೆಯಲ್ಲೂ ಶಿವನ ವೇಷದ ಮೂಲಕ ಮಕ್ಕಳಲ್ಲಿ ಶಿವನ ಪ್ರಜ್ಞೆ ತಿಳಿಯುತ್ತದೆ. ಇದು ಮಕ್ಕಳಿಗೆ ಎಳವೆಯಲ್ಲೇ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ಪೂರ್ಣ ಪ್ರಜ್ಞೆ ಬೆಳೆಯುತ್ತದೆ. ಇಂತಹ ಕಾರ್ಯಕ್ರಮ ಆಯೋಜಿಸಿದ ದೇವಳದ ಆಡಳಿತ ಮಂಡಳಿಯ ಧನ್ಯಾತಾ ಭಾವನೆಯನ್ನು ಅಭಿನಂದಿಸಿದರು.

ದೇವರ ಸೇವೆಯ ವಿಶೇಷ ಅವಕಾಶ ನಮಗೆ ಸಿಕ್ಕಿದೆ:
ಸಭಾಧ್ಯಕ್ಷತೆ ವಹಿಸಿದ್ದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಶಿವನೆ ನಮಗೆ ದಾರಿ ತೋರಿಸಿದಂತೆ ನಾವು ಕಾರ್ಯಕ್ರಮ ಆಯೋಜಿಸಿದ್ದೇವೆ. ಅಷ್ಟಮಂಗಲ ಪ್ರಶ್ನೆಯಲ್ಲಿ ವಿವಿಧ ವಿಚಾರ ತಿಳಿದು ಬಂದಂತೆ ಹಲವು ಕಾರ್ಯಕ್ರಮ ನಾವು ಮಾಡಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವೆಲ್ಲ ಹಿಂದುಗಳು ಹಿಂದು ತತ್ವವವನ್ನು ಉಳಿಸಬೇಕು. ಶಿವನಿಗೆ ಇರುವ ಕೋಪ ಇಳಿಸಲು ಹಿಮರಿಗಿಯ ಮೂಲಕ ವಿವಿಧ ಕಾರ್ಯಕ್ರಮ ಆಯೋಜಿಸಿದೆ ಎಂದರು. ವೇದಿಕೆಯಲ್ಲಿ ಛದ್ಮ ವೇಷ ಸ್ಪರ್ಧೆ ತೀರ್ಪುಗಾರರಾದ ಚಲನಚಿತ್ರ ನಟ ಚೇತನ್ ಮಾಣಿ, ಕಲಾವಿದೆ ಅನ್ನಪೂರ್ಣ, ಯಕ್ಷಗಾನ ಕಲಾವಿದೆ ಅಂಬಾಪ್ರಸಾದ್ ಪಾತಾಳ ಉಪಸ್ಥಿತರಿದ್ದರು. ಡಾ. ಶಶಿಧರ್ ಕಜೆ, ಸುರೇಶ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ವೀಣಾ ಬಿ.ಕೆ ಅತಿಥಿಗಳನ್ನು ಗೌರವಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಡಾ.ಸುಧಾ ಎಸ್ ರಾವ್ ಸ್ವಾಗತಿಸಿದರು. ಪದ್ಮಾ ಕೆ ಆರ್ ಆಚಾರ್ಯ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಚಿಕ್ಕಪ್ಪ ನಾಕ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ವೀಣಾ ಬಿ.ಕೆ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು. ರೇಡಿಯೋ ಪಾಂಚಜನ್ಯದ ನಿರ್ವಾಹಕಿ ತೇಜಸ್ವಿನಿ ರಾಜೇಶ್ ಸ್ಪರ್ಧಾ ಕಾರ್ಯಕ್ರಮದ ವಿವರಣೆ ನೀಡಿದರು.

LEAVE A REPLY

Please enter your comment!
Please enter your name here