ಕಡಬ ಸಮುದಾಯ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ವಿಶೇಷ ಶಿಬಿರದಲ್ಲಿ ಏಕೈಕ ಡಾಕ್ಟರ್ ! ಕಾದು ಕಾದು ಸುಸ್ತಾದ ವಿಕಲಚೇತನರು

0

ಕಡಬ: ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ಇಂದು ಬುದ್ಧಿಮಾಂದ್ಯ ಹಾಗೂ ಮಾನಸಿಕ ವಿಕಲಚೇತನ ವಿಶೇಷ ಶಿಬಿರ ನಡೆಯುತ್ತಿದ್ದು ಏಕೈಕ ಡಾಕ್ಟರ್ ನಿರ್ವಹಿಸುತ್ತಿರುವ ಕಾರಣ ಜನಜಂಗುಳಿ ಉಂಟಾಗಿದೆ.

ವಿವಿಧ ಗ್ರಾಮಗಳಿಂದ ಬಂದಿರುವ ಬುದ್ಧಿಮಾಂದ್ಯ ಹಾಗೂ ಮಾನಸಿಕ ವಿಕಲಚೇತನರು ಕಾದು ಕಾದು ಸುಸ್ತುಗೊಂಡು ಆಸ್ಪತ್ರೆಯ ಕಾರಿಡಾರ್ ನೆಲದಲ್ಲೇ ಕುಳಿತು ವಿಶ್ರಾಂತಿ ಪಡೆದು ಕಂಗಲಾಗಿರುವ ದೃಶ್ಯ ಕಂಡು ಬಂದಿದೆ.

ಏಕಕಾಲಕ್ಕೆ ಅಂಗವಿಕಲರಿಗೆ ಮತ್ತು ಬುದ್ದಿಮಾಂದ್ಯರಿಗೆ ಶಿಬಿರವನ್ನು ಏರ್ಪಡಿಸಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ ಎನ್ನಲಾಗಿದೆ. ದೂರದ ಪುತ್ತೂರಿಗೆ ಹೋಗುವ ಬದಲು ಕಡಬದಲ್ಲಿ ವಿಶೇಷ ಶಿಬಿರ ಮಾಡಿದರೂ ಮಂಗಳೂರಿನಿಂದ ಓರ್ವ ವೈದ್ಯಾಧಿಕಾರಿ ಶಿಬಿರಕ್ಕೆ ಬೇಕಾದ ವೈಧ್ಯಾಧಿಕಾರಿಗಳು ,ಸಿಬ್ಬಂದಿಗಳನ್ನು ನಿಯೋಜಿಸದ ಕಾರಣ ವಿಶೇಷಚೇತನರಿಗೆ ತ್ವರಿತ ಸೇವೆಗಳು ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here