ಪೆರಾಜೆ ಗ್ರಾ.ಪಂ : ಗಾಂಧಿಪ್ರಸಾದ ರಿಂದ‌ ತೆರವಾದ ಸದಸ್ಯ ಸ್ಥಾನಕ್ಕೆ ಅ.28 ರಂದು ಉಪಚುನಾವಣೆ

0

 

 

ಪೆರಾಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಗಾಂಧಿ ಪ್ರಸಾದ ನಿಧನದಿಂದ ತೆರವಾದ ಪಂಚಾಯತ್ ಸದಸ್ಯ ಸ್ಥಾನಕ್ಕೆ ಅಕ್ಟೋಬರ್ 28ರಂದು ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಕೆ ಈಗಾಗಲೇ ಆರಂಭಗೊಂಡಿದ್ದು ಗಾಂಧಿ ಪ್ರಸಾದರ ಪತ್ನಿ ತುಳಸಿ ಗಾಂಧಿ ಪ್ರಸಾದ್ ಎಂಬವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರವೀಣ್ ಮಜಿಕೋಡಿ ಎಂಬವರು ನಾಮಪತ್ರ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದವರ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here