ಪುತ್ತೂರು ಹಾಸ್ಟೇಲ್ ನ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ – ಪೋಕ್ಸೋ ಪ್ರಕರಣದಡಿ ದಾಖಲಾದ ಆರೋಪಿ ಐವರ್ನಾಡಿನ ಯುವಕನ ಬಂಧನ

0

ಪುತ್ತೂರು: ಪುತ್ತೂರು ಹಾಸ್ಟೇಲ್ ನಿಂದ ಕಾಲೇಜಿಗೆ ಹೋಗುತ್ತಿದ್ದ ಸುಳ್ಯದ ಅಪ್ರಾಪ್ತೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಸುಳ್ಯ  ಐವರ್ನಾಡಿನ ಯುವಕನ ವಿರುದ್ಧ ಪುತ್ತೂರು ಮಹಿಳಾ ಠಾಣಾ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಸುಳ್ಯ ಐವರ್ನಾಡು ನಿವಾಸಿ ರಕ್ಷಿತ್ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾದ ಆರೋಪಿ.  ಸುಳ್ಯ  ಮೂಲದ 16 ವರ್ಷದ ಅಪ್ರಾಪ್ತ ನೊಂದ ಬಾಲಕಿ ಪುತ್ತೂರು ಹಾಸ್ಟೇಲ್ ನಿಂದ ಕಾಲೇಜಿನಲ್ಲಿ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿದ್ದರು. ಈ ನಡುವೆ  ಸುಳ್ಯ ಐವರ್ನಾಡು  ಗ್ರಾಮದ  ರಕ್ಷಿತ್‌ ಎಂಬಾತ ಅಪ್ರಾಪ್ತೆಯನ್ನು  ಪ್ರೀತಿಸುತಿರುವ ಕುರಿತು ಮಾಹಿತಿ ಪಡೆದ ನೊಂದ ಬಾಲಕಿಯ ಮನೆಯವರು ಆತನಿಗೆ ಬುದ್ದಿವಾದ ಹೇಳಿದ್ದರು.ಅಲ್ಲದೆ  ನೊಂದ ಬಾಲಕಿಯ  ತಂದೆ   ರಕ್ಷಿತ್‌ ನ ವಿರುದ್ದ  ಸುಳ್ಯ ಪೊಲೀಸ್  ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ. ಆ ಬಳಿಕವೂ ರಕ್ಷಿತ್‌  ಪುತ್ತೂರು ಹಾಸ್ಟೇಲ್ ವಾರ್ಡನ್  ಗೆ  ನೊಂದ ಬಾಲಕಿಯ ಅಣ್ಣನೆಂದು ತಿಳಿಸಿ ನೊಂದ ಬಾಲಕಿಗೆ ಪೋನ್‌ ಕೊಡಲು ಹೇಳಿ  ನೊಂದ ಬಾಲಕಿಯೊಂದಿಗೆ ಮಾತನಾಡಿ ಹೊರಗಡೆ ಎಲ್ಲಾದರೂ  ಭೇಟಿಯಾಗುವಂತೆ ತಿಳಿಸಿದಾಗ ನೊಂದ ಬಾಲಕಿ ಇದನ್ನು ವಿರೋಧಿಸಿದಾಗ, ನೀನು ಬಾರದೇ ಇದ್ದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ನೊಂದ ಬಾಲಕಿ   ಹೆದರಿ ದಿನಾಂಕ ಫೆ.27ರಂದು ಬೀರಮಲೆಗುಡ್ಡೆಗೆ ಬರುವುದಾಗಿ ಹೇಳಿ ಬೀರಮಲೆಗುಡ್ಡೆಗೆ ಹೋಗಿದ್ದ ಸಮಯ ಆರೋಪಿ ರಕ್ಷಿತ್ ಆಕೆಗೆ ಲೈಂಗಿಕ‌ ಕಿರುಕುಳ ನೀಡಿ ಬೆದರಿಕೆ ಹಾಕಿದ್ದರು. ಘಟನೆ ಕುರಿತು ನೊಂದ ಬಾಲಕಿ ನೀಡಿದ ದೂರಿನಂತೆ ಮಹಿಳಾ ಪೊಲೀಸರು ರಕ್ಷಿತ್ ವಿರುದ್ಧ ಸೆಕ್ಷನ್ 354 ಎ, 506 ಐಪಿಸಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಮಾ.5 ರಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here