ಕಾವು ಮುತ್ತುಮಾರಿಯಮ್ಮ ಜಾತ್ರಾಮಹೋತ್ಸವ ಸಂಪನ್ನ

0

ಪುತ್ತೂರು: ಕಾವು ಶ್ರೀ ಮುತ್ತುಮಾರಿಯಮ್ಮ ದೇವಿ ಹಾಗೂ ಪರಿವಾರ ದೇವರುಗಳ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.6ರಂದು ಸಂಪನ್ನಗೊಂಡಿತು.ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವೈಧಿಕ ಕಾರ್ಯಕ್ರಮಗಳು ನಡೆಯಿತು.

 


ಮಾ.4 ರಿಂದ ಮಾ. 6 ರತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜತ್ರಾಮಹೋತ್ಸವ ನಡೆಯಿತು. ಮಾ. 4ರಂದು ಶೋಭಾಯಾತ್ರೆ, ಶುದ್ದಿಲಕಲಶ, ಗಣಹೋಮ, ತ್ರಿಕಾಲಪೂಜೆ, ಪ್ರಸಾದ ವತರಣೆ, ಅನ್ನಸಂತರ್ಪಣೆ, ಬೆಳಿಗ್ಗೆ 6 ರಿಂದ ಸಂಜೆ 6 ತನಕ ಭಜನಾ ಕಾರ್ಯಕ್ರಮ ನಡೆಯಿತು. ಸೀತಾರಾಮ ಕೊಂಕಣಿಗುಂಡಿ ದ್ವೀಪ ಪ್ರಜ್ವಲನೆ ಮಾಡುವ ಮೂಲಕ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಜನಾ ಕಾರ್ಯಕ್ರಮದಲ್ಲಿ ೧೨ ತಂಡಗಳು ಭಾಗವಹಿಸಿದ್ದವು.

ಮಾ. 5ರಂದು ಪೂಜೆ, ಶ್ರೀದೆವಿಗೆ ಕ್ಷೀರಾಭಿಷೇಕ, ಮಹಾಪೂಜೆ, ಅಗ್ನಕುಂಡಕ್ಕೆ ಅಗ್ನಿಸ್ಪರ್ಶ, ಅನ್ನಸಂತರ್ಪಣೆ, ದೇವಿಯ ಕರಗಳ ಮೆರವಣಿಗೆ, ಅಗ್ನಿ ಸೇವೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಕಾವು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ದಿನಾಂಕ ಮಾ. 6 ಆದಿತ್ಯವಾರದಂದು ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ಈ ವರ್ಷಾವಧಿ ಜಾತ್ರಾ ಮಹೋತ್ಸವದಲ್ಲಿ ತ್ರಿಕಾಲ ಪೂಜೆ, ಭಜನಾ ಸಂಕೀರ್ತನೆ, ಕರಗಗಳ ಭವ್ಯ ಮೆರವಣಿಗೆ, ಅಗ್ನಿಸೇವೆ, ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆದು ಸಹಸ್ರಾರು ಭಕ್ತರು ಶ್ರೀ ದೇವಿಯ ದರ್ಶನ ಪಡೆದು ಪುನೀತರಾದರು. ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here