ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಫೈಬರ್ ದೋಟಿಯಿಂದ ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಯ ತರಬೇತಿ

0

ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಒಂದು ದಿನದ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರವು ಮಾ.8ರಂದು ಬೆಳಿಗ್ಗೆ ಮಳಿ ರಾಮಚಂದ್ರ ಭಟ್‌ರವರ ಮನೆಯಲ್ಲಿ ನಡೆಯಿತು. ಪ್ರಗತಿಪರ ಕೃಷಿಕ ಮಳಿ ರಾಮಚಂದ್ರ ಭಟ್‌ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ಸ್ವಾಗತಿಸಿ, ಸಿಬ್ಬಂದಿ ಸುನೀಲ್ ಎನ್ ವಂದಿಸಿದರು.

 

 

 

 

 

ತರಬೇತಿ:
ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಮತ್ತು ಔಷಧ ಸಿಂಪಡಣೆಯ ಬಗ್ಗೆ ಮಳಿ ರಾಮಚಂದ್ರ ಭಟ್‌ರವರ ತೋಟದಲ್ಲಿ ತರಬೇತಿ ನಡೆಯಿತು. ಅಡಿಕೆ ಕೌಶಲ್ಯ ಪಡೆಯ ಆರ್.ಜಿ ಹೆಗಡೆ ಮತ್ತು ರಮೇಶ್ ಭಟ್ ಕಲ್ಲಬ್ಬೆಯವರು ತರಬೇತುದಾರರಾಗಿ ಭಾಗವಹಿಸಿದರು. ಶಿಬಿರದಲ್ಲಿ ೨೦ ಜನ ತರಬೇತಿಯನ್ನು ಪಡೆದುಕೊಂಡರು. ಶಿಬಿರಾರ್ಥಿಗಳಿಗೆ ಕಾವು ಸಹಕಾರ ಸಂಘದಿಂದ ಹೆಲ್ಮೆಟ್ ಮತ್ತು ಟೀಶರ್ಟ್‌ನ್ನು ಉಚಿತವಾಗಿ ನೀಡಲಾಯಿತು. ಸುಮಾರು ೧೦೦ಕ್ಕೂ ಅಧಿಕ ಅಡಿಕೆ ಕೃಷಿಕರು ತರಬೇತಿ ಕಾರ್ಯಕ್ರಮದಲ್ಲಿ ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here