ಬಿ.ಯಂ.ಎಸ್ ಆಟೋ ರಿಕ್ಷಾ ಚಾಲಕರ, ಮಾಲಕರ ಸಂಘ ಮುಂಡೂರು ಘಟಕದ ವಾರ್ಷಿಕ ಮಹಾಸಭೆ – ಲಂಚ ಭ್ರಷ್ಟಾಚಾರದ ವಿರುದ್ಧ ಘೋಷಣೆ -ಸನ್ಮಾನ

0

 

ಪುತ್ತೂರು: ಮುಂಡೂರು ಘಟಕದ ಬಿ.ಯಂ.ಎಸ್ ಆಟೋ ರಿಕ್ಷಾ ಚಾಲಕರ ಮಾಲಕರ 6 ನೇ ವರ್ಷದ ವಾರ್ಷಿಕ ಮಹಾಸಭೆಯು ಮಾ.5 ರಂದು ಮುಂಡೂರು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಸುದ್ದಿ ಜನಾಂದೋಲನ ವೇದಿಕೆ ಮಾರ್ಗದರ್ಶನದಲ್ಲಿ ನಡೆಯತ್ತಿರುವ ಲಂಚ ಭ್ರಷ್ಟಾಚಾರದ ವಿರುದ್ಧದ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿ ಫಲಕ ಹಿಡಿದು ಲಂಚ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದರು.

ಮುಂಡೂರು ಬಿ ಎಮ್ ಎಸ್ ಆಟೋ ರಿಕ್ಷಾ ಚಾಲಕರ, ಮಾಲಕರ ಸಂಘದ ಅಧ್ಯಕ್ಷ ಸಂಕಪ್ಪ ನಾಯ್ಕ್ ಅವರ ಸಭಾಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಘಟಕದ ಗೌರವಾಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ತಾಲೂಕು ಬಿ ಎಂ ಎಸ್ಆಟೋ ರಿಕ್ಷಾ ಚಾಲಕರ-ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಮರೀಲ್, ಮಾಜಿ ಗೌರವ ಅಧ್ಯಕ್ಷರಾದ ದೇವಪ್ಪಗೌಡ . ಜಿ. ಹುಸೇನ್, ಬಿ. ಕೆ ಸುಂದರ ನಾಯ್ಕ್, ಸತೀಶ್ ಪ್ರಭು, ವಾಸುದೇವ ಸಾಲಿಯಾನ್, ಕುರಿಯ ಘಟಕದ ಅಧ್ಯಕ್ಷ ರಜಾಕ್, ರಮೇಶ್ ಅಂಚನ್ ಮತ್ತು ಟಿ.ವಿ.ಎಸ್ ನ ಪ್ರಮೋದ್ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಮುಂಡೂರು ಪಾರ್ಕಿನಲ್ಲಿ. ಟಿ. ವಿ. ಎಸ್ ನ ಪ್ರಮೋದ್ ರವರು ನೀಡಿದ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು.

 


ಸನ್ಮಾನ:
ಕೋವಿಡ್ ಸಂದರ್ಭದಲ್ಲಿ ರಿಕ್ಷಾ ಚಾಲಕರ ಕಷ್ಟಕ್ಕೆ ಸ್ಪಂಧಿಸಿ ಕಿಟ್ ವಿತರಣೆ ಮಾಡಿದ ಘಟಕದ ಗೌರವಾಧ್ಯಕ್ಷ ರಮೇಶ್ ಗೌಡ, ಗುತ್ತಿಗೆದಾರ ವಾಸುದೇವ ಸಾಲಿಯಾನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂಕಪ್ಪ ನಾಯ್ಕ್ ಅವರನ್ನು ಗೌರವಿಸಲಾಯಿತು.

ಲಂಚ, ಭ್ರಷ್ಟಾಚಾರ ವಿರುದ್ಧ ಘೋಷಣೆ:
ಮಹಾಸಭೆಯ ಸನ್ಮಾನ ಕಾರ್ಯಕ್ರಮದ ಬಳಿಕ ಸುದ್ದಿ ಜನಾಂದೋಲನ ವೇದಿಕೆ ಮಾರ್ಗದರ್ಶನದಲ್ಲಿ ನಡೆಯತ್ತಿರುವ ಲಂಚ ಭ್ರಷ್ಟಾಚಾರದ ವಿರುದ್ಧದ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿ ಬಿಎಂಎಸ್ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಫಲಕ ಹಿಡಿದು ಲಂಚ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದರು.

ಕಾರ್ಯಕ್ರಮದಲ್ಲಿ ಘಟಕದ ಕಾರ್ಯದರ್ಶಿ ಸುಧಾಕರ್. ದುಗ್ಗಪ್ಪ. ಕೆ. ಅಬ್ದುಲ್ ಝಿಯಾದ್ . ಸಾದಿಕ್. ಕೆ ಆರ್ ಮಂಜುನಾಥ್ ಶಶಿಕುಮಾರ್. ಯಾಕೊಬ್. ರಮೇಶ್.ಅಬ್ದುಲ್ ಹಮೀದ್. ಅಬ್ದುಲ್ ಖಾದರ್.ಪ್ರಸಾದ್. ಇಸಾಕ್. ಶಾಕಿರ್. ಸಿದ್ದಿಕ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಬಾಲಕೃಷ್ಣ ರೈ ಪೊಳಲಿ ಸ್ವಾಗತಿಸಿ ನವೀನ್ ಕೋಟ್ಯಾನ್.ವಂದಿಸಿದರು.

LEAVE A REPLY

Please enter your comment!
Please enter your name here