ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2022-23 ನೇ ಸಾಲಿನ ಬಿ.ಇ. ವಿದ್ಯಾರ್ಥಿಗಳ ಶೈಕ್ಷಣಿಕ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ

0

ಶಿಕ್ಷಣವೇ ಪ್ರಬಲ ಅಸ್ತ್ರ, ಇದು ಜಗತ್ತನ್ನೇ ಬದಲಾಯಿಸಬಹುದು – ಡಾ.ಆರ್.ಪಿ.

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ೨೦೨೨-೨೩ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ“Bridge Course Programme ನ ಉದ್ಘಾಟಣಾ ಕಾರ್ಯಕ್ರಮವು ಕೆ.ವಿ.ಜಿ.ಸಿ.ಇ. ಸಭಾಂಗಣದಲ್ಲಿ ದಿನಾಂಕ 17 ರಂದು ಡಾ. ರೇಣುಕಾಪ್ರಸಾದ್ ಕೆ.ವಿ., ಪ್ರಧಾನ ಕಾರ್ಯದರ್ಶಿಗಳು, ಎ.ಒ.ಎಲ್.ಇ(ರಿ) ಕುರುಂಜಿಬಾಗ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿಗಳು ೨೦೨೨-೨೩ನೇ ಸಾಲಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಹಾರೈಸಿ, ಕಾಲೇಜಿನಲ್ಲಿ ಹೊಸ ಶೈಕ್ಷಣಿಕ ಪದ್ಧತಿಯ ಅನುಸಾರವಾಗಿ ಕಾಲೇಜಿನ ಎಲ್ಲಾ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಂಡು ವಿದ್ಯಾರ್ಥಿ ಸಮೂಹಕ್ಕೆ ಅನುಕೂಲವಾಗುವ ಹಾಗೆ ಸಿದ್ಧಗೊಂಡಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಯುವ ಸಮೂಹ ಪಡೆದುಕೊಳ್ಳಬೇಕೆಂದು ಆಶಿಸಿದರು ಹಾಗೂ ಪ್ರತೀಯೊಂದು ವಿದ್ಯಾರ್ಥಿಗೂ ಅಂತಿಮ ಸೆಮಿಸ್ಟರ್ ವೇಳೆಗೆ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ವತಿಯಿಂದ ಉದ್ಯೋಗಾವಕಾಶವನ್ನು ಒದಗಿಸಿಕೊಡುವ ಭರವಸೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ.ಯವರು ಕಠಿಣ ಪರಿಶ್ರಮ, ಶಿಸ್ತು, ಶ್ರದ್ಧೆ ಇವೇ ಮುಂತಾದವುಗಳನ್ನು ಒಳಗೊಂಡ ಅಧ್ಯಯನವು ವಿದ್ಯಾರ್ಥಿಗಳಿಗೆ ಯಶಸ್ಸನ್ನು ತಂದು ಕೊಡುತ್ತವೆ ಎಂದು ಕಿವಿ ಮಾತು ಹೇಳಿದರು ಹಾಗೂ ವಿದ್ಯಾರ್ಥಿ ಜೀವನದಿಂದಲೇ ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಮಾತನಾಡಿ ವಿದ್ಯಾರ್ಥಿಗಳಿಗೆ ಸಮಯವನ್ನು ವ್ಯರ್ಥ ಮಾಡದೇ ಉನ್ನತ ಶಿಕ್ಷಣದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕೆಂದು, ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತರುವಂತೆ ಮಾಡಬೇಕೆಂದು ಕರೆ ನೀಡಿದರು.

ಡೀನ್ ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಉಮಶಂಕರ್ ಕೆ.ಎಸ್. ಮಾತನಾಡಿ ಕಾಲೇಜಿನ ಶೈಕ್ಷಣಿಕ ಪದ್ಧತಿ ಹಾಗೂ ಕಲಿಕಾ ರೂಪುರೇಶಗಳನ್ನು ವಿವರಿಸಿ, ವಿದ್ಯಾರ್ಥಿಗಳು ಕಾಲೇಜಿನ ಶಿಸ್ತನ್ನು ಪಾಲಿಸಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಿ ಆರೋಗ್ಯಕರ ವಿದ್ಯಾರ್ಥಿ ಜೀವನವನ್ನು ಆಹ್ಲಾದಿಸಿ ಎಂದು ಶುಭಹಾರೈಸಿದರು. ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ. ಸ್ವಾಗತಿಸಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಎ. ವಂದನಾರ್ಪಣೆಗೈದರು. ಎಂ.ಬಿ.ಎ. ವಿದ್ಯಾರ್ಥಿನಿ ಅನುಷಾಲಕ್ಶ್ಮಿ ಪ್ರಾರ್ಥನೆಗೈದು, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ಪ್ರೊ. ಅರುಣ ಪಿ.ಜಿ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ. ಲೇಖ ಬಿ.ಎಂ. ಇವರು ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಕುಸುಮಾಧರ ಎಸ್., ಎಂ.ಬಿ.ಎ. ವಿಭಾಗ ಮುಖ್ಯಸ್ಥರು ಪ್ರೊ. ಕೃಷ್ಣಾನಂದ ಎ., ಭೌತಶಾಸ್ತ್ರ ವಿಭಾಗ ಮುಖ್ಯಸ್ಥರು ಹಾಗು ಡೀನ್-ಎಕ್ಸಾಮಿನೇಶನ್ ಡಾ. ಪ್ರವೀಣ ಎಸ್.ಡಿ., ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥರು ಡಾ. ಸುರೇಖ ಎಂ., ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ., ಡೀನ್-ಅಡ್ಮಿಶನ್ ಪ್ರೊ. ಬಾಲಪ್ರದೀಪ್ ಕೆ.ಎನ್., ಡೀನ್-ಹಾಸ್ಟೆಲ್ ಡಾ. ಭಾಗ್ಯ ಹೆಚ್.ಕೆ., ಡೈರೆಕ್ಟರ್ ಆಫ್ ಪಿ.ಜಿ. ಸ್ಟಡೀಸ್ ಡಾ. ಸವಿತಾ ಎಂ., ಡೀನ್-ರೀಸರ್ಚ್ ಡಾ. ಸವಿತಾ ಸಿ.ಕೆ., ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ. ಪ್ರಜ್ಞಾ ಎಂ.ಆರ್., ಪ್ರೊ. ಲೋಕೇಶ್ ಪಿ.ಸಿ., ಕೆ.ವಿ.ಜಿ. ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಭಾಸ್ಕರ್ ಎಸ್. ಬೇಲೆಗದ್ದೆ ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here