ಶೃಂಗೇರಿ ಮಹಾಸಂಸ್ಥಾನದ ಗುರುದೇವತಾ ಭಜನಾ ತರಬೇತಿ ಶಿಬಿರದ ಆಮಂತ್ರಣ ಬಿಡುಗಡೆ

0

 

ಶೃಂಗೇರಿಶ್ರೀ ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾ ಸಂಸ್ಥಾನದ ಆಶ್ರಯದಲ್ಲಿ ಸುಳ್ಯ ಸುಬ್ರಹ್ಮಣ್ಯ ಭಜನಾ ಮಂಡಳಿಯಆಯೋಜನೆಯಲ್ಲಿ ಅ.30 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಶ್ರೀ ಗುರುದೇವತಾ ಭಜನಾ ಮಂಜರಿ ಒಂದು ದಿನದ ಭಜನಾ ತರಬೇತಿ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಅ.20 ರಂದು ಚೆನ್ನಕೇಶವ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

 

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ ರವರು ಪ್ರಾರ್ಥಿಸಿ ಆಮಂತ್ರಣ ಪತ್ರಬಿಡುಗಡೆಗೊಳಿಸಿದರು. ದೇವಸ್ಥಾನದ ಅರ್ಚಕರು ಪೂಜೆ ನೆರವೇರಿಸಿದರು.

 


ಈ ಸಂದರ್ಭದಲ್ಲಿ ಶಿಬಿರದ
ಸಂಚಾಲಕಿ ಶ್ರೀಮತಿ ಶಶಿಕಲಾ ಹರಪ್ರಸಾದ್ ತುದಿಯಡ್ಕ, ಉಪಾಧ್ಯಕ್ಷ ಡಾ.ಸದಾಶಿವ ರಾವ್ ಸುಳ್ಯ, ಜತೆ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ, ನಿರ್ದೇಶಕರಾದ ಭಾಸ್ಕರ ರಾವ್ ಬಯಂಬು,ಗಿರಿಜಾ ಶಂಕರ ತುದಿಯಡ್ಕ, ಅರುಣ್ ಕುಮಾರ್ ನೆಲ್ಲಿಕುಂಜೆ,ಸತೀಶ್ ರಾವ್ ದಾಸರಬೈಲು,ಲಕ್ಷ್ಮೀನಾರಾಯಣ ರಾವ್ ರೆಂಜಾಳ, ಸುರೇಶ್ ಕೆ, ಶ್ರೀಮತಿ ಸುಜಾತ ಎನ್,ಶ್ರೀಮತಿ ವಿದ್ಯಾ ರಮೇಶ್ ಬೇರಿಕೆ, ಶ್ರೀಮತಿಜಯಶ್ರೀತುದಿಯಡ್ಕ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here