ಮಾ.17,18 : ಬನ್ನೂರು ಕಂಜೂರು ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

 

ಪುತ್ತೂರು: ವರ್ಷದಲ್ಲಿ ಎರಡು ಭಾರಿ ನೇಮೋತ್ಸವ ನಡೆಯುವ ಏಕೈಕ ಗ್ರಾಮವಾದ ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನಕ್ಕೆ ಸಂಬಂಧಿಸಿ ಜಾತ್ರೆ ಮುಗಿದು ಮಾರನೆ ದಿನ ಮಾ‌. 17 ಮತ್ತು 18 ರಂದು ಬನ್ನೂರು ಗ್ರಾಮದ ಕಂಜೂರಿನಲ್ಲಿ ನಡೆಯುವ ದೊಂಪದ ಬಲಿ ನೇಮೋತ್ಸವಕ್ಕೆ ಮಾ.10 ರಂದು ಗೊನೆ ಮುಹೂರ್ತ ನಡೆಯಿತು.

 


ಮಾರಿ ನೇಮ ಮತ್ತು ದೊಂಪದ ಬಲಿ ನೇಮೋತ್ಸವದೊಂದಿಗೆ ವರ್ಷದಲ್ಲಿ ಎರಡು ಭಾರಿ ನೇಮ ನಡೆಯುವ ಇತಿಹಾಸವುಳ್ಳ ಕುಂಟ್ಯಾನ ಕ್ಷೇತ್ರಕ್ಕೆ ಸಂಬಂಧಿಸಿ ಮಾ.15 ಮತ್ತು 16 ರ ಬಳಿಕ ಮಾ.17 ಮತ್ತು 18 ರಂದು ನಡೆಯುವ ಕಂಜೂರು ದೊಂಪದ ಬಲಿ ನೇಮೋತ್ಸವಕ್ಕೆ ಗೊನೆ ಮುಹೂರ್ತಕ್ಕಾಗಿ ಬೆಳಿಗ್ಗೆ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ, ಕಂಜೂರು ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಸಂಪ್ರದಾಯದಂತೆ ದೇವಸ್ಯ ಈಶ್ವರ ಗೌಡ ಮತ್ತು ಬನ್ನೂರು ಹಲಂಗ ಪುರುಷೋತ್ತಮ ಗೌಡ ಅವರ ತೋಟದಿಂದ ಮೂರು ಗೊನೆಗಳಿಗೆ ಮುರ್ಹೂತ ಮಾಡಲಾಯಿತು. ಈ ಸಂದರ್ಭದಲ್ಲಿ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಸದಸ್ಯರಾದ ಈಶ್ವರ ಗೌಡ ಗೊಳ್ತಿಲ, ಬನ್ನೂರು ಗ್ರಾ.ಪಂ ಸದಸ್ಯ ಶೀನಪ್ಪ ಕುಲಾಲ್, ದೈವಸ್ಥಾನಕ್ಕೆ ಸಂಬಂಧಿಸಿದ ಶೇಖರ್ ಗೌಡ ದೇವಸ್ಯ, ಲಕ್ಷ್ಮಣಗೌಡ ಹಲಂಗ, ವಸಂತ ಗೌಡ ದೇವಸ್ಯ, ಕಾಂತಪ್ಪ ಗೌಡ, ವಿಶ್ವನಾಥ ಗೌಡ ಕಲ್ಲಿಮಾರ್, ಅಶೋಕ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here