ಕೋಲ್ಪೆ ಮಖಾಂ ಉರೂಸ್ ಸಮಾರೋಪ

0

 

ನೆಲ್ಯಾಡಿ: ಬದ್ರಿಯಾ ಜುಮಾ ಮಸ್ಜಿದ್ ಸಯ್ಯಿದ್ ಮಲ್ಹರ್ ವಲಿಯುಲ್ಲಾ(ಖ.ಸಿ.) ಕೋಲ್ಪೆ-ನೆಲ್ಯಾಡಿ ಇದರ ಆಶ್ರಯದಲ್ಲಿ ನೆಲ್ಯಾಡಿ-ಕೋಲ್ಪೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಮಾ.7ರಂದು ಆರಂಭಗೊಂಡ ಕೋಲ್ಪೆ ಮಖಾಂ ಉರೂಸ್‌ನ ಸಮಾರೋಪ ಸಮಾರಂಭ ಮಾ.10ರಂದು ಸಂಜೆ ನಡೆಯಿತು.

 

ಅಸ್ಸಯ್ಯಿದ್ ಅಬ್ರುರ್ರಶೀದ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್‌ರವರು ದುಆಶೀರ್ವಚನ ನೀಡಿದರು. ಕೋಲ್ಪೆ ಮುದರ್ರಿಸ್ ಮುಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿಯವರು ಉದ್ಘಾಟಿಸಿದರು. ಚೊಕ್ಕಬೆಟ್ಟು ಮುದರ್ರಿಸ್ ಯು.ಕೆ.ಅಬ್ದುಲ್ ಅಝೀಝ್ ದಾರಿಮಿಯವರು ಮುಖ್ಯ ಪ್ರಭಾಷಣ ನೀಡಿದರು. ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್‌ರವರು ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಇದರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಮಾಡನ್ನೂರು ನೂರುಲ್ ಹುದಾದ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ, ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಕೊಡಾಜೆ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಜ್ ದಾರಿಮಿ, ನೂರುಲ್ ಹುದಾ ವ್ಯವಸ್ಥಾಪಕ ಕೆ.ಯು.ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ, ಎಸ್‌ಕೆಎಸ್‌ಎಸ್‌ಎಸ್‌ಎಫ್ ದ.ಕ.ಈಸ್ಟ್ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಕೌಸರಿಯವರು ಮಾತನಾಡಿ ಶುಭಹಾರೈಸಿದರು. ಯು.ಟಿ.ಇಫ್ತಿಕಾರ್ ಅಲಿ ಮಂಗಳೂರು, ಅಬ್ದುಲ್ ಲತೀಫ್ ಯೂನಿವರ್ಸಲ್ ಗ್ರೂಪ್ ಸಿಇಡಿ ರಿಯಾದ್, ಬಶೀರ್ ಎಂ.ಡಿ.ಮಂಗಳೂರು ಮಾರ್ಕೆಟಿಂಗ್, ನಿಶಿಕಾ ಗ್ರೂಪ್‌ನ ಅಬ್ದುಲ್ ಹಮೀದ್ ಅಸ್ಕಾಫ್, ಎಸ್‌ಕೆಎಸ್‌ಎಸ್‌ಎಫ್ ದುಬೈ ಕರ್ನಾಟಕ ಘಟಕದ ಅಧ್ಯಕ್ಷ ಸಯ್ಯಿದ್ ಆಸ್ಕರ್ ಆಲೀ ತಂಙಳ್ ಕೋಲ್ಪೆ, ಸೌದಿ ಅರೇಬಿಯಾದಲ್ಲಿ ಇಂಜಿನಿಯರ್ ಆಗಿರುವ ಅಶ್ರಫ್ ಸಮರಗುಂಡಿ, ಶಾಹುಲ್ ಹಮೀದ್ ಕಡಬಕ್ಕಾರ್‍ಸ್-ಮಂಗಳೂರು, ಸಯ್ಯಿದ್ ಮುಸ್ತಫಾ ತಂಙಳ್ ಕೋಲ್ಪೆ, ಉಪ್ಪಿನಂಗಡಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಉಸ್ಮಾನ್ ಹಾಜಿ ಚೆನ್ನಾರ್ ಸಂಪ್ಯ, ಸಮಾಜ ಸೇವಕ ಹಾಜಿ ರಫೀಕ್ ಮಾಸ್ಟರ್, ಮಸೀದಿ ನಿರ್ಮಾಣ ಸಲಹಾ ಸಮಿತಿ ಸದಸ್ಯ ರಝಾಕ್ ಅಂಬರ್ಜೆ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಸೀಗಲ್, ಮಲ್ಲಿಗೆಮಜಲು ಫಝಲ್ ಜುಮಾ ಮಸೀದಿ ಅಧ್ಯಕ್ಷ ಉಮರ್ ಬೈಲಂಗಡಿ, ಮಠ ಬಿಜೆಎಂ ಅಧ್ಯಕ್ಷ ನಝೀರ್ ಮಠ, ಎಸ್‌ಕೆಎಸ್‌ಎಸ್‌ಎಫ್ ಪುತ್ತೂರು ವಲಯ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಪಾಟ್ರಕೋಡಿ, ಕಡಬ ರೇಂಜ್ ಮದ್ರಸ ಮ್ಯನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ಪಿ.ಎ.ಅಬ್ದುಲ್ಲಾ, ಅಡ್ವಕೇಟ್ ಇಸ್ಮಾಯಿಲ್ ನೆಲ್ಯಾಡಿ, ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕೆ.ಪಿ.ತೋಮಸ್ ನೆಲ್ಯಾಡಿ, ಮಂಗಳೂರು ಅಶೋಕ ಎಂಟರ್‌ಪ್ರೈಸಸ್‌ನ ಇಕ್ಬಾಲ್ ಕೋಲ್ಪೆ, ಬೆಳ್ತಂಗಡಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಸ್.ಕೆ.ಹಕೀಂ ಕೊಕ್ಕಡ, ಕೊಕ್ಕಡದ ಉದ್ಯಮಿ ಶರೀಫ್ ಬೋಳದಬೈಲು, ಸತೀಶ್ ರೈ ಕೊಣಾಲುಗುತ್ತು, ಕೋಲ್ಪೆ ಬಿಜೆಎಂ ಮಾಜಿ ಅಧ್ಯಕ್ಷ ಎಂ.ಆದಂ, ಯು.ಕೆ.ಅಬ್ದುಲ್ ಹಮೀದ್ ಕೋಲ್ಪೆ, ಕೆ.ಅಬ್ದುಲ್ ನಾಸಿರ್ ಹೊಸಮನೆ ಮತ್ತಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ಎಸ್.ಶರೀಫ್ ಸ್ವಾಗತಿಸಿದರು. ಕೆಎಸ್‌ಡಿಸಿ ಕೋಲ್ಪೆ ಅಧ್ಯಕ್ಷ ಹಾಜಿ ಕೆ.ಕೆ.ಇಸ್ಮಾಯಿಲ್ ವಂದಿಸಿದರು. ಕೋಲ್ಪೆ ಬಿಜೆಎಂ ಕೋಶಾಧಿಕಾರಿ ಕೆ.ಎಸ್.ನಾಸಿರ್ ಸಮರಗುಂಡಿ ನಿರೂಪಿಸಿದರು. ರಾತ್ರಿ ಅನ್ನದಾನ ನಡೆಯಿತು.

ಸನ್ಮಾನ:
ಎಸ್‌ಕೆಎಸ್‌ಎಸ್‌ಎಫ್ ದ.ಕ.ಈಸ್ಟ್ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಕೌಸರಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಜಿ ಕೆ.ಕೆ.ಇಸ್ಮಾಯಿಲ್ ಕೋಲ್ಪೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here