ಪೈಲಾರು ಯಕ್ಷೋತ್ಸವ ದಶ ಸಂಭ್ರಮದ ಉದ್ಘಾಟನಾ ಸಮಾರಂಭ

0

 

 

ಯಕ್ಷೋತ್ಸವದ ಮೂಲಕ
ತುಳುನಾಡ ಮಣ್ಣಿನ ಪರಂಪರೆ,ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಿದೆ – ಲಕ್ಷ್ಮೀ ನಾರಾಯಣ

ಪೈಲಾರು ಫ್ರೆಂಡ್ಸ್ ಕ್ಲಬ್ ಹಾಗೂ ಶೌರ್ಯ ಯುವತಿ ಮಂಡಲ ಇದರ ಸಹಯೋಗದಲ್ಲಿ 10 ನೇ ವರ್ಷದ ಪೈಲಾರು ಯಕ್ಷೋತ್ಸವ 2022 ಇದರ ಉದ್ಘಾಟನಾ ಸಮಾರಂಭ ಅ.22 ರಂದು ಪೈಲಾರು ಶಾಲೆಯ ವಠಾರದ ವಿಶ್ವನಾಥ ಗೌಡ ತೊಡಿಕಾನ ವೇದಿಕೆಯಲ್ಲಿ ನಡೆಯಿತು.


ಸುಳ್ಯ ನೆಹರು ಸ್ಮಾರಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಎಂ.ಎಂ.ರುದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಲಕ್ಷ್ಮೀ ನಾರಾಯಣ ಐವರ್ನಾಡು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ದೊಡ್ಡತೋಟ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಾರಾಂ ಬೆಟ್ಟ, ಆಲೆಟ್ಟಿ ಸರಕಾರಿ ಪ್ರೌಢಶಾಲೆ ಶಿಕ್ಷಕಿ ಶ್ರೀಮತಿ ರೇವತಿ ಮದುವೆಗದ್ದೆ, ಬೆಂಗಳೂರು ಇನ್ ಸ್ಟ್ಯಾಕ್ ಇಂಕ್ ಪ್ರೈ. ಲಿ. ವ್ಯವಸ್ಥಾಪಕ ನಿರ್ದೇಶಕ ‌ವಿಠಲದಾಸ್ ಕಡಪಳ, ಪೈಲಾರು ಸ.ಹಿ.ಪ್ರಾ.ಶಾಲೆಯ ಅಧ್ಯಕ್ಷೆ ಶ್ರೀಮತಿ ದೇವಕಿ ಪೈಲಾರು ಉಪಸ್ಥಿತರಿದ್ದರು.

ಯಕ್ಷಗಾನ ಭಾಗವತ ಪ್ರಶಾಂತ್ ರೈ ಪಂಜ ಪ್ರಾರ್ಥಿಸಿದರು. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಜೈದೀಪ್ ಕಡಪಳ ಸ್ವಾಗತಿಸಿ, ಶೌರ್ಯ ಯುವತಿ ಮಂಡಲ ಅಧ್ಯಕ್ಷೆ ಚರಿಷ್ಮ ಕಡಪಳ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭ ಆರಂಭಕ್ಕೆ ಮುಂಚಿತವಾಗಿ ಯಕ್ಷ ಗಾನ ವೈಭವ ಪ್ರದರ್ಶನಗೊಂಡಿತು. ಬಳಿಕ ರಾತ್ರಿ ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ‌ಇವರಿಂದ ಚಕ್ರ ಚಂಡಿಕೆ ಬಡಗುತಿಟ್ಟು ಯಕ್ಷಗಾನ ‌ಬಯಲಾಟ ಪ್ರದರ್ಶನವಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರು ಮತ್ತು ಯುವತಿ ಮಂಡಲದ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು. ಆಗಮಿಸಿದ ಎಲ್ಲಾ ‌ಕಲಾಭಿಮಾನಿಗಳಿಗೆ ಸಂಜೆ ಉಪಹಾರ ಹಾಗೂ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ದ.ಕ.ಜಿಲ್ಲೆ ವೈವಿಧ್ಯಮಯ ವಿಶಿಷ್ಟ ಪ್ರದೇಶ. ಯಕ್ಷಗಾನ ಕಲೆಯ ಮೂಲಕ ಮೇರು ವ್ಯಕ್ತಿಗಳನ್ನು ಸಮಾಜಕ್ಕೆ ಪರಿಚಯಿಸಿದೆ. ತುಳುನಾಡಿನ ಸಂಸ್ಕೃತಿ ಪರಂಪರೆಯನ್ನು ಯಕ್ಷೋತ್ಸವ ಕಾರ್ಯಕ್ರಮದ ಮುಖಾಂತರ ಕಳೆದ ಹತ್ತು ವರ್ಷಗಳಿಂದ ಜಗತ್ತಿಗೆ ತೋರಿಸಿಕೊಡುವ ಕಾಯಕದಲ್ಲಿ ಪೈಲಾರು ಯುವ ಸಮೂಹ ತೊಡಗಿಸಿರುವುದು ಶ್ಲಾಘನೀಯ- ಲಕ್ಷ್ಮೀ ನಾರಾಯಣ ಐವರ್ನಾಡು

ದೇಶದ ಹಿರಿಮೆಯನ್ನು ಸಂಸ್ಕೃತಿಯನ್ನು ಎತ್ತಿ ತೋರಿಸುವುದರೊಂದಿಗೆ ಯಕ್ಷಗಾನ ಕಲೆ ಮೇಳೈಸಿದೆ.ಎಲ್ಲಾ ಕಲಾ ಪ್ರಕಾರಗಳು ಯಕ್ಷಗಾನದಲ್ಲಿ ಅಡಕವಾಗಿದೆ. ಮುಂದಿನ ಪೀಳಿಗೆಗೆ ಇದರ ಅರಿವು ಮೂಡಿಸುವ ಕಾರ್ಯ ಯಕ್ಷೋತ್ಸವದಿಂದ ದೊರಕಲಿ-ರಾಜಾರಾಂ ಬೆಟ್ಟ

ಯುವ ಸಮೂಹದಲ್ಲಿ ಹಿಂದಿನ ಕಾಲದ ಕಲಾ ಪ್ರಕಾರಗಳನ್ನು ಉಳಿಸಿಕೊಳ್ಳುವ ಅಭಿರುಚಿ ಕಡಿಮೆ ಇರುವ ಕಾಲ ಘಟ್ಟದಲ್ಲಿ ಯಕ್ಷಗಾನ ಕಲೆಯನ್ನು ಪೈಲಾರಿನಲ್ಲಿ ಕಳೆದ ಹತ್ತು ಸಂವತ್ಸರಗಳಿಂದ ನಡೆಸಿಕೊಂಡು ಬರುತ್ತಿರುವ ಯುವಕ ಯುವತಿಯರ ಕಾರ್ಯ ಅಭಿನಂದನೀಯ- ರುದ್ರಕುಮಾರ್

ನಮ್ಮ ಮಣ್ಣಿನ ಸಂಸ್ಕೃತಿ ನೆಲೆಗಟ್ಟನ್ನು ಉಳಿಸಿ ಬೆಳೆಸುವ ಯುವ ತಂಡದ ಸದಸ್ಯರ ಕಾರ್ಯ ಒಳ್ಳೆಯ ವಿಚಾರವಾಗಿದೆ. ಯಕ್ಷಗಾನ ಕಲೆಯಿಂದ ಮುಂದಿನ ಪೀಳಿಗೆಯ ಬೆಳವಣಿಗೆಗೆ ಪೂರಕ ವಾತಾವರಣ ಲಭಿಸುವುದು- ರೇವತಿ ಮದುವೆಗದ್ದೆ

ಯಕ್ಷೋತ್ಸವ ಕಾರ್ಯಕ್ರಮ ಆಯೋಜನೆ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಿ ಮಕ್ಕಳ ಮೇಳ ರಚಿಸಿಕೊಂಡು ರಾಜ್ಯದಲ್ಲಿ ಹೆಸರು ಮಾಡಿರುವುದು ಅಭಿನಂದನೀಯ.ಗ್ರಾಮೀಣ ಭಾಗದ ಕಲಾ ರಸಿಕರಿಗೆ ನಿರಂತರ ಹತ್ತು ವರ್ಷಗಳಿಂದ ರಸದೌತಣ ನೀಡುವ ಮೂಲಕ ಪೈಲಾರು ಊರಿನ ಹೆಸರು ಉಳಿಸಿಕೊಂಡಿದೆ- ವಿಠಲದಾಸ ಕಡಪಳ

LEAVE A REPLY

Please enter your comment!
Please enter your name here