ಕನಕಮಜಲು: ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಭಜನಾ ಮಹೋತ್ಸವ ಪೂರ್ವಭಾವಿ ಸಭೆ

0

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಮುಂಬರುವ ಫೆಬ್ರವರಿಯಲ್ಲಿ ಜರಗುವ ನಿರಂತರ 72 ಗಂಟೆಗಳ ಭಜನಾ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಅ.23ರಂದು ಶ್ರೀ ಆತ್ಮಾರಾಮ ಸಭಾಭವನದಲ್ಲಿ ಜರಗಿತು.

ಭಜನಾ ಮಂಡಳಿ ಅಧ್ಯಕ್ಷ ವಸಂತ ಮಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಈಶ್ವರ ಕೊಂರ್ಬಡ್ಕ ಅವರು ಭಜನಾ ಮಹೋತ್ಸವದ ಕಾರ್ಯಕ್ರಮದ ರೂಪುರೇಷೆಗಳನ್ನು ಸಭೆಯ ಮುಂದಿಟ್ಟರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಭಜನಾ ಮಹೋತ್ಸವ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರುಗಳಾಗಿ ವಸಂತ ಗಬ್ಬಲಡ್ಕ, ಆನಂದ ಮಾಸ್ತರ್ ಅಕ್ಕಿಮಲೆ, ಅಧ್ಯಕ್ಷರಾಗಿ ಜಗನ್ನಾಥ ಕಾಪಿಲ , ಕಾರ್ಯದರ್ಶಿಯಾಗಿ ಕುಸುಮಾಧರ ಬೊಮ್ಮೆಟ್ಟಿ, ಖಜಾಂಚಿಯಾಗಿ ದಾಮೋದರ ಗೌಡ ಕೋಡ್ತೀಲು , ಪ್ರಧಾನ ಸಂಯೋಜಕರಾಗಿ ದಾಮೋದರ ಕಣಜಾಲು , ಸಂಚಾಲಕರಾಗಿ ಕೆ.ಎಂ. ಹರೀಶ್ ಮೂರ್ಜೆ, ಸಹ ಸಂಚಾಲಕರಾಗಿ ಶ್ರೀಧರ ಕುತ್ಯಾಳ ಹಾಗೂ ಸಹ ಸಂಯೋಜಕರು , ಉಪಾಧ್ಯಕ್ಷರು ಹಾಗೂ ಸಲಹಾ ಸಮಿತಿಯ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here