ಕೊಳ್ತಿಗೆ: ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನೋತ್ಸವದ ಸಂಭ್ರಮ

0

ಪುತ್ತೂರು: ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನೋತ್ಸವ ಕಾರ್ಯಕ್ರಮಗಳು ಮಾ.11 ರಂದು ವಿಜೃಂಭಣೆಯಿಂದ ನಡೆಯಿತು. ಪ್ರತಿಷ್ಠಾ ದಿನೋತ್ಸವದ ಪ್ರಯುಕ್ತ ಶ್ರೀ ಗಣಪತಿ ದೇವರಿಗೆ ಮೂಡಪ್ಪ ಸೇವೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಬೆಳಿಗ್ಗೆ ಗಂಟೆ 8 ರಿಂದ ಗಣಪತಿ ಹೋಮ, ಸಂಜೆ ಗಂಟೆ 4 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಗಂಟೆ 6 ರಿಂದ ದೀಪಾರಾಧನೆ, ರಾತ್ರಿ ಗಂಟೆ 8:30 ರಿಂದ ಶ್ರೀ ದುರ್ಗಾ ಪೂಜೆ, ರಂಗಪೂಜೆ ಹಾಗೂ ಮೂಡಪ್ಪ ಸೇವೆ ನಡೆದು, ಬಳಿಕ ಭಕ್ತಾಭಿಮಾನಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಂಜೆ ಗಂಟೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಪಂಗೋಡು ವಿಘ್ನರಾಜ್ ಮತ್ತು ಕಾಂಚನ ಈಶ್ವರ ಭಟ್ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆದು ರಾತ್ರಿ ಗಂಟೆ 10 ರಿಂದ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ‘ಎನ್ನ ಬಂಗ ಎಂಕೇ ಗೊತ್ತು ‘ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಸಾವಿರಾರು ಭಕ್ತಾದಿಗಳು ಭಾಗಿ: ಶ್ರೀ ಕ್ಷೇತ್ರದ ಪ್ರತಿಷ್ಠಾ ದಿನೋತ್ಸವದಲ್ಲಿ ಊರ ಪರ ಊರ ಸಾವಿರಾರು ಭಕ್ತರು ಭಾಗವಹಿಸಿದರು. ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನೇಮಿರಾಜ ಪಾಂಬಾರು, ಉತ್ಸವ ಸಮಿತಿ ಅಧ್ಯಕ್ಷರಾದ ತೀರ್ಥಾನಂದ ಗೌಡ ದುಗ್ಗಳ, ವ್ಯವಸ್ಥಾಪನಾ ಸಮಿತಿ ಹಾಗೂ ಉತ್ಸವ ಸಮಿತಿಯ ಸದಸ್ಯರುಗಳು ಹಾಗೂ ಊರಿನ ಸಮಸ್ತ ಭಕ್ತಾಭಿಮಾನಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here