ಜಲಜೀವನ್ ಮಿಷನ್ ಕಾರ್ಯಾಗಾರ 

0

ಪುತ್ತೂರು:  ಯಾವುದೇ ವ್ಯಕ್ತಿ ಶುದ್ಧ ಕುಡಿಯುವ ನೀರಿನಿಂದ ವಂಚಿತನಾಗಬಾರದೆಂಬ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆ ಜಾರಿಗೆ ಬಂದಿದೆ.‌ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ ಎಂದು ದ.ಕ.ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ನರೇಂದ್ರ ಬಾಬು.ಜಿ ಅವರು ಹೇಳಿದರು.


ಅವರು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ಆಯೋಜಿಸಲಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಜಲಜೀವನ್ ಮಿಷನ್ ಅನುಷ್ಠಾನಲ್ಲಿ ಪಂಚಾಯತ್ ಸದಸ್ಯರ ಪಾತ್ರದ ಕುರಿತು ಒಳಮೊಗ್ರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಅರಿವು ಮೂಡಿಸಿದರು. ನೀರಿನ ಕಲುಷಿತ ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಜಗದೀಶ್ ಮಾಹಿತಿ ನೀಡಿದರು. ತಾಂತ್ರಿಕ ವಿಷಯಗಳನ್ನು ಪುತ್ತೂರು ತಾಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರ ರೂಪ್ಲಾ ನಾಯಕ್ , ಕಿರಿಯ ಅಭಿಯಂತರರಾದ ಅಜಿತ್, ಈಶ್ವರ್ ಅವರು ತಿಳಿಸಿದರು. ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಇಒ ನವೀನ್ ಭಂಡಾರಿ ವಹಿಸಿದ್ದರು. ಅನುಷ್ಠಾನ ಬೆಂಬಲ ಸಂಸ್ಥೆಯ ಜಿಲ್ಲಾ ತಂಡದ ಶಿವರಾಮ್, ಮಹಾಂತೇಶ್ ಹಿರೇಮಠ್, ಫಲಹಾರೇಶ್ ಮಣ್ಣೂರಮಠ್, ಸುರೇಶ್, ಚರಣ್, ಅಶ್ವಿನ್ ಕುಮಾರ್ ಕಾರ್ಯಕ್ರಮ, ಜಿಲ್ಲಾ ಯೋಜನಾ ವ್ಯವಸ್ಥಾಪಕ ವಿಘ್ನೇಶ್ ರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here