ಕಡಬ ತಾ| ಸರಕಾರಿ ನೌಕರರ ಕ್ರಿಕೆಟ್, ತ್ರೋಬಾಲ್ ಪಂದ್ಯಾಟ

0

ಕಡಬ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಡಬ ವತಿಯಿಂದ ಕಡಬ ತಾಲೂಕು ಸರಕಾರಿ ನೌಕರರಿಗಾಗಿ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ ಕಡಬ ಸೈಂಟ್ ಜೋಕಿಮ್ಸ್ ಮೈದಾನದಲ್ಲಿ ಆದಿತ್ಯವಾರ ನಡೆಯಿತು.

 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ವಿಮಲ್ ಕುಮಾರ್ ವಹಿಸಿದರು. ಉದ್ಘಾಟನೆಯನ್ನು ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೃಷ್ಣ ಪಿಕೆ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಎಚ್.ಪಿ. ರಾಘವೇಂದ್ರ, ಕಡಬ ಠಾಣಾ ಉಪನಿರೀಕ್ಷಕ ರುಕ್ಮ ನಾಯ್ಕ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಶುಭ ಹಾರೈಸಿದರು. ತಾಲೂಕು ಕಾರ್ಯದರ್ಶಿ ರವಿಚಂದ್ರ ಸ್ವಾಗತಿಸಿ, ಉಪಾಧ್ಯಕ್ಷ ಜೆರಾಲ್ಡ್ ವಂದಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೆವರೆಂಡ್ ಫಾದರ್ ಅರುಣ್ ವಿಲ್ಸನ್ ಲೋಬೋ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಂ ಏನೇಕಲ್, ಸುಳ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥಾರಾಂ, ಸುಬ್ರಹ್ಮಣ್ಯ ಠಾಣೆಯ ಉಪ ನಿರೀಕ್ಷಕ ಜಂಬುರಾಜ್ ಮಹಾಜನ್, ರಾಜ್ಯ ಪರಿಷತ್ ಸದಸ್ಯ ಮಾಮಚ್ಚನ್, ಕೋಶಾಧಿಕಾರಿ ಶೇಷಾದ್ರಿ, ಗೌರವಾಧ್ಯಕ್ಷ ರಾಮಕೃಷ್ಣ ಮಲ್ಲಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುರುಷರ ವಿಭಾಗದ ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್ ತಂಡವಾಗಿ ಶಿಕ್ಷಣ ಇಲಾಖೆ ಪ್ರಶಸ್ತಿಯನ್ನು ಪಡೆದರೆ, ದ್ವಿತೀಯ ಸ್ಥಾನವನ್ನು ಪೊಲೀಸ್ ಇಲಾಖೆ ಪಡೆದುಕೊಂಡಿತು. ಮಹಿಳೆಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಶಿಕ್ಷಣ ಇಲಾಖೆ ಪ್ರಥಮ ಸ್ಥಾನ ಪಡೆದರೆ, ಪಂಚಾಯತ್ ರಾಜ್ ಇಲಾಖೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

LEAVE A REPLY

Please enter your comment!
Please enter your name here