ಮಾ.18 : ಕೋಡಿಂಬಾಡಿ ಮಠದಬೆಟ್ಟು ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ, ಜಾತ್ರೋತ್ಸವ

0

ಪುತ್ತೂರು : ಕೋಡಿಂಬಾಡಿ ಮಠದಬೆಟ್ಟು ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮತ್ತು ಜಾತ್ರೋತ್ಸವ ಮಾ.18ರಂದು ಕ್ಷೇತ್ರದ ತಂತ್ರಿ ವೇ.ಮೂ.ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರೀರವರ ನೇತೃತ್ವದಲ್ಲಿ ನಡೆಯಲಿದೆ. ಬೆಳಿಗ್ಗೆ 7ರಿಂದ ದೇವತಾ ಪ್ರಾರ್ಥನೆ, ಪಂಚವಿಂಶತಿ ಕಲಶ ಪ್ರತಿಷ್ಠೆ, ಗಣಪತಿ ಹೋಮ, ಅಧಿವಾಸ ಹೋಮ, ಕಲಶಾಭಿಷೇಕ, ಏಕಾದಶ ರುದ್ರಾಭಿಷೇಕ, ಲಲಿತಾ ಸಹಸ್ರನಾಮ ಪಾರಾಯಣ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳಿಗೆ ತಂಬಿಲ, ಭಜನಾ ಸೇವೆ, ಶ್ರಿದೇವಿಗೆ ಮಹಾರಂಗಪೂಜೆ, ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ವಸಂತಕಟ್ಟೆ ಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here