ಕೋಡಿಂಬಾಡಿ ವನಿತಾ ಸಮಾಜದ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

0

  • ಗೌರವಾಧ್ಯಕ್ಷರು: ಶಯನಾ ಜಯಾನಂದ, ಅಧ್ಯಕ್ಷರು: ಧರ್ಮಾವತಿ, ಕಾರ್ಯದರ್ಶಿ ಭಾರತಿ ದೇವಾನಂದ

ಪುತ್ತೂರು: ಕೋಡಿಂಬಾಡಿಯ ವನಿತಾ ಸಮಾಜದ ಮಹಾಸಭೆ ಮತ್ತು ಪದಾಧಿಕಾರಿಗಳ ಆಯ್ಕೆ ಮಾ.12ರಂದು ಕೋಡಿಂಬಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ವನಿತಾ ಸಮಾಜದ ನೂತನ ಗೌರವಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಯನಾ ಜಯಾನಂದ ಕೋಡಿ, ಅಧ್ಯಕ್ಷರಾಗಿ ಧರ್ಮಾವತಿ ಸೇಡಿಯಾಪು, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ರಮೇಶ್ ನಾಯಕ್ ನಿಡ್ಯ, ಕಾರ್ಯದರ್ಶಿಯಾಗಿ ಶಿಕ್ಷಕಿ ಭಾರತಿ ದೇವಾನಂದ ಕೋಡಿ, ಜತೆ ಕಾರ್ಯದರ್ಶಿಯಾಗಿ ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ, ಕೋಶಾಧಿಕಾರಿಯಾಗಿ ವೇದಾವತಿ ಸದಾಶಿವ ರೈ ಮಿತ್ತಳಿಕೆ ಮತ್ತು ಲೆಕ್ಕಪರಿಶೋಧಕರಾಗಿ ಭುವನೇಶ್ವರಿ ಶರ್ಮ ಮಠದಬೆಟ್ಟುರವರನ್ನು ಆಯ್ಕೆ ಮಾಡಲಾಯಿತು.


ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಅಧ್ಯಕ್ಷತೆ ವಹಿಸಿದ್ದರು. ದೇಜಮ್ಮ ಹೆಗ್ಡೆ ಮಿತ್ತಳಿಕೆ, ಸುಮಲತಾ ಬಾಬು ಗೌಡ ಭಂಡಾರದಮನೆ, ಭವ್ಯ ದಾಮೋದರ ಶೆಟ್ಟಿ ಮಠಂತಬೆಟ್ಟು, ಅಕ್ಷತಾ ಪಿ. ಸಾಮಾನಿ ಮಠಂತಬೆಟ್ಟು, ಸೌಮ್ಯಾ ಶಿವಪ್ರಕಾಶ್ ಮೋನಡ್ಕ, ನಿವೃತ್ತ ಮುಖ್ಯಗುರು ಯಶೋದಾ, ಗ್ರಾ.ಪಂ.ಮಾಜಿ ಅಧ್ಯಕ್ಷೆ ರೇವತಿ ವೀರಪ್ಪ ಪೂಜಾರಿ ಡೆಕ್ಕಾಜೆ, ಯಮುನಾ ಡೆಕ್ಕಾಜೆ, ಮಮತಾ ಗಂಗಾಧರ ಶೆಟ್ಟಿ, ರೇಣುಕಾ ಮುರಳೀಧರ ರೈ ಮಠಂತಬೆಟ್ಟು, ಹರಿಣಿ ರಮೇಶ್ ಭಂಡಾರಿ ಕೈಪ, ಸ್ವಾತಿ ಜಯಂತ ತುರ್ಕೆದಗುರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here