ಸಂಸ್ಕಾರ ಭಾರತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತ್ಯಾಗರಾಜ ಆರಾಧನಾ ಮಹೋತ್ಸವ

0

 

ಪುತ್ತೂರು: ಸಂಸ್ಕಾರ ಭಾರತಿ ಪುತ್ತೂರು ತಾಲೂಕು ಘಟಕದ ವತಿಯಿಂದ ತ್ಯಾಗರಾಜ ಆರಾಧನಾ ಮಹೋತ್ಸವವರು ಮಾ.9ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

 

ಪುತ್ತೂರಿನ ವಿವಿಧ ಸಂಗೀತಶಾಲಾ ಗುರುಗಳಾದ, ವಿದುಷಿಯರಾದ  ವೀಣಾ ರಾಘವೇಂದ್ರ,  ವಿದ್ಯಾ ಈಶ್ವರಚಂದ್ರ,  ಸವಿತ ಕೋಡಂದೂರು,  ಉಮಾಶಂಕರಿ ಮಣಿಪಾಲ,  ಗೀತಾ ಸಾರಡ್ಕ,  ಪ್ರೀತಿಕಲಾ,  ಪಾರ್ವತಿ ಪದ್ಯಾಣ,  ಮಾನಸ ಪದ್ಯಾಣ, ಮಾಲಿನಿ,  ರಮಾ ಪ್ರಭಾಕರ್ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮೃದಂಗದಲ್ಲಿ ವಿದ್ವಾನ್ ಬಾಲಚಂದ್ರ ಆಚಾರ್ ಮಣಿಪಾಲ. ವಿದ್ವಾನ್ ಬಾಲಕೃಷ್ಣ ಹೊಸಮನೆ, ವಸಂತಕೃಷ್ಣ ಮತ್ತು ಮಾ. ಅಚಿಂತ್ಯ ಕೃಷ್ಣ, ವೀಣೆಯಲ್ಲಿ ವಿದುಷಿ ಪವನ ಬಾಲಚಂದ್ರ ಮಣಿಪಾಲ, ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ ಮತ್ತು ಅನನ್ಯ ಪುಳು ಹಿಮ್ಮೇಳದಲ್ಲಿ ಸಹಕರಿಸಿದರು. ಕಾರ್ಯಕ್ರಮದ ಮಾರ್ಗದರ್ಶಕರಾಗಿ ಆಗಮಿಸಿದ ಗಾನಕೇಸರಿ ವಿದ್ವಾನ್ ಕುದುಮಾರು ವೆಂಕಟರಾಮನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಡಾ. ಸುಧಾ ರಾವ್ ಶುಭ ಹಾರೈಸಿದರು. ಪುತ್ತೂರು ತಾಲೂಕು ಕಾರ್ಯಕ್ರಮ ಸಂಯೋಜಕ ವಿದ್ವಾನ್ ದೀಪಕ್ ಕುಮಾರ್ ಮತ್ತು ಜಿಲ್ಲಾ ಉಪಾಧ್ಯಕ್ಷೆ  ರೂಪಲೇಖಾ ಅವರು ಅತಿಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು. ಜಿಲ್ಲಾ ಭರತನಾಟ್ಯ ವಿಧಾ ಪ್ರಮುಖ್ ವಿದುಷಿ  ನಯನಾ ವಿ. ರೈಯವರು ದಿವಂಗತ ವಿದ್ವಾನ್ ರಾಮಕೃಷ್ಣ ಭಟ್ ಅವರನ್ನು ಸ್ಮರಿಸಿ ಸ್ವಾಗತಿಸಿದರು. ಸದಸ್ಯೆ  ಶಂಕರಿ ಶರ್ಮ ವಂದಿಸಿದರು.

LEAVE A REPLY

Please enter your comment!
Please enter your name here