ದಾನಿಗಳ ನೆರವು : ಗ್ರಾ.ಪಂ. ಅಧ್ಯಕ್ಷರ ನೇತೃತ್ವ

0

 

ಸಂಪಾಜೆಯಲ್ಲಿ ಬಡ ಕುಟುಂಬಕ್ಕೆ 10 ಲಕ್ಷ ರೂ ವೆಚ್ಚದಲ್ಲಿ ಹೊಸ ಮನೆ : ಹಸ್ತಾಂತರ

 

ದಾನಿಗಳ ನೆರವು ಪಡೆದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ರ ನೇತೃತ್ವದಲ್ಲಿ ಸಂಪಾಜೆ ಗ್ರಾಮದ ಬಡ ಕುಟುಂಬವೊಂದಕ್ಕೆ ರೂ.10 ಲಕ್ಷ ವೆಚ್ಚದಲ್ಲಿ ಹೊಸ ಮನೆ ಕಟ್ಟಲಾಗಿದ್ದು ಅದರ ಹಸ್ತಾಂತರ ಕಾರ್ಯಕ್ರಮ ಅ.23 ರಂದು ನಡೆಯಿತು.

ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೂಲಿಶೆಡ್ ನಲ್ಲಿ ಬಹಳ ಕಷ್ಟದಲ್ಲಿ ಜೀವನ ನಡೆಸುತ್ತ ಹಸೈನಾರ್ ದಂಪತಿಗಳಿಗೆ ಇದೀಗ ಹೊಸ ಮನೆ ಹಸ್ತಾಂತರ ಗೊಂಡಿದೆ.

ಕಷ್ಟದಲ್ಲಿದ್ದ ಈ ವೃದ್ದ ದಂಪತಿಗಳಿಗೆ ಅನಿವಾಸಿ ಭಾರತೀಯ ಕಲ್ಲುಗುಂಡಿ ಯ ಯುವಕರು ರೂ.25 ಸಾವಿರ ರೂಪಾಯಿ ನೀಡಿದ್ದರು. ಆ ಹಣದಲ್ಲಿ ದಂಪತಿಗಳು ಹೊಸ ಮನೆಯ ಫೌಂಡೇಶನ್ ಕೆಲಸ ಮಾಡಿದರು. ಆದರೆ ಮತ್ತೆ ಅವರಿಂದ ಮುಂದುವರಿಯಲು ಸಾಧ್ಯವಾಗಲಿಲ್ಲ. ವೃದ್ದ ದಂಪತಿಯ ಮನೆಯ ಕನಸು ಅರ್ಧಕ್ಕೆ ನಿಂತಿತು.

ಕಳೆದ ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಈ ಮನೆ ಬಾರಿ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡಿದವು. ನಂತರದ ದಿನಗಳಲ್ಲಿ ಸ್ಥಳೀಯ ವಾರ್ಡ್ ಸದಸ್ಯ ಜಿ. ಕೆ. ಹಮೀದ್‌ ಗೂನಡ್ಕ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರಲ್ಲದೆ, ಪಂಚಾಯತ್ ಅಧ್ಯಕ್ಷತೆಯ ಗದ್ದುಗೆ ಏರಿದರು. ಹಸೈನಾರ್ ಕುಟುಂಬಕ್ಕೆ ಮನೆ ನಿರ್ಮಿಸುವ ಸಂಕಲ್ಪವನ್ನು ಜಿ.ಕೆ. ಹಮೀದ್ ಕೈಗೊಂಡರಲ್ಲದೆ, ಆದೂರ್ ಹಕೀಮ್ ತಂಗಳ್ ಜಿ. ಕೆ., ತಾಜ್ ಮಹಮ್ಮದ್, ರಫೀಕ್ ಕೆ. ಎಮ್. ಹಸೈನಾರ್ ಎ. ಕೆ. ಸಾಥ್ ನೀಡಿದರು. ಕುಂಟತಾ ಸಾಗಿದ ಮನೆಗೆ ವರ್ತಕರ ಸಂಘದ ಅಧ್ಯಕ್ಷರಾದ ಚಕ್ರಪಾಣಿ, ಮಹಮ್ಮದಾಲಿ ನೆಲ್ಲಿಕುಮೆರಿ ರಹೀಮ್ ಬೀಜದ ಕಟ್ಟೆ, ಕಿಪಾಯತುಲ್ಲ ಭಾರತ್, ದುರ್ಗಾ ಪ್ರಸಾದ್, ಅಪ್ಪುಕುಂಞಿ (ಚೇರಿಯಪ್ಪ ),ಅಶ್ರಫ್ ಎಚ್.ಎ ತ್ಯಾಗರಾಜ್ ನೆಲ್ಲಿಕುಮೆರಿ, ಕನಕೋಡ್ ಮಹಮ್ಮದ್ ಗುಜರಿ ವ್ಯಾಪಾರಿ ಇಕ್ಬಾಲ್ ಸುಳ್ಯ ಆದೂರ್ ಹಕೀಮ್ ತಂಗಳ್ ರವರ ವಿಶೇಷ ಸಹಕಾರ ಮನೆ ಟೆರೇಸ್ ಹಂತಕ್ಕೆ ಬಂತು. ನಂತರದ ಕಾಸರಗೋಡು ಭಾಗದ ಗುತ್ತಿಗೆದಾರ ನಿಜಾರ್ ಪೂವ್ವಲ್ ರವರ ಪೂರ್ತಿ ನೆರವು ಹಾಗೂ ಸಹೃದಯಿ ನಾಗರಿಕರ ನೆರವನ್ನು ಪಡಕೊಂಡ ಜಿ. ಕೆ ಹಮೀದ್ ಗೂನಡ್ಕ ಸುಮಾರು ಅಂದಾಜು 10. ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರ ಮನೆ ಮಾಡಿದರು.

ಗೃಹ ಪ್ರವೇಶ : ಅ.23 ರಂದು ನೂತನ ಮನೆಯ ಪ್ರವೇಶ ಕಾರ್ಯಕ್ರಮ ನಡೆಯಿತು. ವರ್ತಕರ ಸಂಘದ ಅಧ್ಯಕ್ಷರಾದ ಚಕ್ರಪಾಣಿ ಹಾಗೂ ಗುತ್ತಿಗೆದಾರರಾದ ನಿಜಾರ್ ಪೋವಲ್ ರಿಬ್ಬನ್ ಕಟ್ ಮಾಡಿ ಚಾಲನೆ ನೀಡಿದರು. ಗೃಹ ಪ್ರವೇಶ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಯ್ಯದ್ ಹಕೀಮ್ ತಂಗಳ್ ಆದೂರ್ ನೆರವೇರಸಿದರು. ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಜುಮಾ ಮಸೀದಿ ಕತೀಬ್ ನಹೀಮ್ ಫೈಜಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಮ್. ಶಾಹಿದ್ ತೆಕ್ಕಿಲ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಉಮರ್ ಬೀಜದ ಕಟ್ಟೆ. ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ಎಸ್. ಕೆ. ಹನೀಫ್, ಅಬೂಸಾಲಿ ಗೂನಡ್ಕ, ವಿಮಲಾ ಪ್ರಸಾದ್, ಸವಾದ್, ಮಾಜಿ ಅಧ್ಯಕ್ಷರಾದ ಯಮುನಾ. ಬಿ. ಎಸ್. ಪದ್ಮಯ್ಯ ಗೌಡ ಬೋಳುಗಲ್ಲು, ಕಿಶೋರ್ ಕುಮಾರ್, ಪ್ರಶಾಂತ್ ವಿ. ವಿ. ಅಯ್ಯುಬ್, ರಹೀಮ್ ಬೀಜದಕಟ್ಟೆ, ಸುನಿಲ್ ಕುಮಾರ್, ದುರ್ಗಾ ಪ್ರಸಾದ್, ದಿನಕರ ಗೌಡ ಸಣ್ಣಮನೆ, ಅಬ್ಬಾಸ್ ಸಂಟ್ಯಾರ್, ಇಬ್ರಾಹಿಂ ಎ. ಕೆ . ಹಸೈನಾರ್ ಎ. ಕೆ. ಸಲೀಂ ಪೆರುಂಗೋಡಿ ಸಿರಾಜ್ ಕರಾವಳಿ.ಮೊದಲದವರು ಭಾಗವಹಿಸಿ ಶುಭ ಹಾರೈಕೆ ಮಾಡಿದರು. ದಾನಿಗಳ ಸಹಕಾರದಿಂದ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಹಕೀಮ್ ತಂಗಳ್ ಆದೂರ್, ತಾಜ್ ಮಹಮದ್, ರಫೀಕ್ ಕೆ. ಎಮ್. ಪ್ರಗತಿ ಚಿಕನ್ ಮುತುವರ್ಜಿ ವಹಿಸಿ ಮನೆ ನಿರ್ಮಾಣ ಮಾಡುವಲ್ಲಿ ವಿಶೇಷ ವಾಗಿ ಸಹಕರಿಸಿದರು

“ಹಸೈನಾರ್ ರು ಹೊಸ ಮನೆಗೆ ಫೌಂಡೇಶನ್ ಹಾಕಿ ಅರ್ಧದಲ್ಲಿ ನಿಂತಿತ್ತು. ಅದನ್ನು ಪೂರ್ತಿ ಮಾಡಿಕೊಡುವ ಸಂಕಲ್ಪ ಕೈಗೊಂಡು ದಾನಿಗಳನ್ನು ಸಂಪರ್ಕಿಸಿದೆವು. ಇದೀಗ ಮನೆ ಕೆಲಸ ಆಗಿ ಹಸ್ತಾಂತರ ನಡೆದಿದೆ. ಬಡ ಕುಟುಂಬಕ್ಕೆ ಮನೆ ಕಟ್ಟಿಸಿದ ಈ ಕ್ಷಣ ತುಂಬಾ ಖುಷಿಯಾಗಿದೆ”

ಜಿ.ಕೆ. ಹಮೀದ್
ಅಧ್ಯಕ್ಷ ರು ಗ್ರಾ.ಪಂ. ಸಂಪಾಜೆ

 

 

 

LEAVE A REPLY

Please enter your comment!
Please enter your name here