ಕಲ್ಲುಗುಂಡಿ ಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯಕೂಟ

0

ಯಶಸ್ವಿ ಯುವಕ ಮಂಡಲ(ರಿ.) ಕಲ್ಲುಗುಂಡಿ ಇದರ ವತಿಯಿಂದ ಕಲ್ಲುಗುಂಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯಕೂಟ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಯಶಸ್ವಿ ಯುವಕ ಮಂಡಲದ ವತಿಯಿಂದ ಕಲ್ಲುಗುಂಡಿಯ ನಡೆಯಲು ಅಸಾಧ್ಯವಾದ ಫಲಾನುಭವಿಯೋರ್ವರಿಗೆ ಉಚಿತವಾಗಿ ವಾಕರ್ ಸಾಧನವನ್ನು ನೀಡಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ನವೀನ, ಸಂಪಾಜೆ ಗ್ರಾ. ಪಂ. ಅಧ್ಯಕ್ಷ ಜಿ.ಕೆ.ಹಮೀದ್, ಸಂಸ್ಥಾಪಕ ರಾಮಕೃಷ್ಣ, ಬಿ ಎಂ ಎಸ್ ಅಧ್ಯಕ್ಷ ಕೇಶವ ಬಂಗ್ಲೆಗುಡ್ಡೆ, ಯುವಜನ ಸಂಯುಕ್ತ ಮಂಡಳಿ ಸುಳ್ಯ ನಿರ್ದೇಶಕ ಪಿ ವಿ ಸುಬ್ರಮಣಿ ಕಲ್ಲುಗುಂಡಿ, ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ,ಚಂದ್ರಶೇಖರ್ ಮೇಲಾಂಟ,  ಸೋಮನಾಥ ಹಾಗೂ ಯುವಕ ಮಂಡಲದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಎಸ್ ಎಂ ಎಸ್ ಸಂಪಾಜೆ, ದ್ವಿತೀಯ ಕೀಲಾರು ಫ್ರೆಂಡ್ಸ್ ಕ್ಲಬ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

 

LEAVE A REPLY

Please enter your comment!
Please enter your name here