ಮಡಪ್ಪಾಡಿ : ಅಕ್ಷಯ ಸಹಕಾರಿ ಮಾರ್ಟ್ ಪ್ರಾರಂಭ

0

ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಸರ್ವ ಸರಕುಗಳ ಮಾರಾಟ ಮಳಿಗೆ ಅಕ್ಷಯ ಸಹಕಾರಿ ಮಾರ್ಟ್‌ನ ಪ್ರಾರಮಭೋತ್ಸವವು ಅ.೨೩ ರಂದು ನಡೆಯಿತು. ಸುಳ್ಯ ರೈತ ಉತ್ಪಾದಕ ಕಂಪೆನಿ ನಿರ್ದೇಶಕ, ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಎಂ.ಡಿ.ವಿಜಯ್‌ಕುಮಾರ್ ದೀಪ ಪ್ರಜ್ವಲಿಸಿದರು. ಅಧ್ಯಕ್ಷರಾದ ಪಿ.ಸಿ.ಜಯರಾಮ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ನಿತ್ಯಾನಂದ ಬಳ್ಳಡ್ಕ, ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ವೆಂಕಟ್ರಮಣ ಹಾಡಿಕಲ್ಲು, ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಭವಾನಿಶಂಕರ ಬಾಳಿಕಳ, ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಶಶಿಧರ ದೇರಾಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ ಸ್ವಾಗತಿಸಿ, ನಿರ್ದೇಶಕ ಸೋಮಶೇಖರ ಕೇವಳ ವಂದಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಪ್ರಭಾಕರ ಕೇವಳ, ಅಜಯ್ ವಿ.ಸಿ., ರಾಜಕುಮಾರ, ಪ್ರವೀಣ ಯತೀಂದ್ರನಾಥ್, ತಾರಾ ಜಿ.ಸಿ., ಕುಂಞಕ್ಕ ಸಿ.ಹೆಚ್., ಶೇಖರ ಕೆ.ಪಿ., ಪೇರಪ್ಪ ಹೆಚ್., ವಿಶ್ವನಾಥ ಆಚಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here