ನಾಡಪ್ರಭು ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಹಿನ್ನಲೆ : ನ.1, 2ರಂದು ಮೃತ್ತಿಕೆ ಸಂಗ್ರಹ ರಥ ಸುಳ್ಯಕ್ಕೆ ಆಗಮನ

0

 


ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಕಂಚಿನ ಪ್ರತಿಮೆ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹನಾ ರಥವು ನ.೧ ಮತ್ತು ೨ ರಂದು ಸುಳ್ಯಕ್ಕೆ ಆಗಮಿಸಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ.
ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಮಾಹಿತಿ ನೀಡಿದರು.

ನ.೧ ಮತ್ತು ೨ ರಂದು ರಥವು ಸುಳ್ಯದಲ್ಲಿ ಮೃತ್ತಿಗೆ ಸಂಗ್ರಹಣೆ ಮಾಡಲಿದ್ದು, ಪಂಜ, ಬೆಳ್ಳಾರೆ, ಸುಳ್ಯ, ಉಬರಡ್ಕ ಮಿತ್ತೂರು, ಸಂಪಾಜೆ ಹಾಗೂ ಕನಕಮಜಲು ಗ್ರಾಮದಲ್ಲಿ ಸಂಚರಿಸುವುದು ಎಂದು ಅವರು ಹೇಳಿದರಲ್ಲದೆ, ಎಲ್ಲರೂ ಈ ರಥವನ್ನು ಸ್ವಾಗತಿಸಬೇಕೆಂದು ಕೇಳಿಕೊಂಡರು. ಅ.೨೮ರಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದು ಸುಳ್ಯ ಬಿಜೆಪಿ ಮಂಡಲದ ವತಿಯಿಂದಲೂ ಕಾರ್ಯಕ್ರಮ ನಡೆಯುವುದು ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here