ಬೀದಿಗುಡ್ದೆ : ದೀಪಾವಳಿ ಹಬ್ಬದ ಪ್ರಯುಕ್ತ ವಾಲಿಬಾಲ್

0

 

ಸದಾ ಸಿದ್ದಿ ಮಿತ್ರ ಬಳಗ ರಿ, ಬೀದಿಗುಡ್ಡೆ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯು ಅ. 23ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಜೀವ ಗೌಡ ಕಾರ್ಜ ನೆರವೇರಿಸಿದರು. ಮಿತ್ರ ಬಳಗದ ಅಧ್ಯಕ್ಷರಾದ ದೀಕ್ಷಿತ್ ಪೆರಿಯಡ್ಕ ಸಭಾಧ್ಯಾಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ತ್ರಿಶೂಲಿನಿ ದೇವಸ್ಥಾನ ಕಾಂಜಿ ಬಳ್ಪ ಇದರ ಉತ್ಸವ ಸಮಿತಿ ಅಧ್ಯಕ್ಷರಾದ ಸದಾನಂದ ರೈ ಅರ್ಗುಡಿ, ಬೀದಿಗುಡ್ಡೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ನಡುಮನೆ, ಧರ್ಮಸ್ಥಳ ಸ್ವ ಸಹಾಯ ಸಂಘದ ಬೀದಿಗುಡ್ಡೆ ಒಕ್ಕೂಟದ ಅಧ್ಯಕ್ಷ ಶೂರಪ್ಪ ಗೌಡ ಕಟ್ಟ, ಸಿದ್ದಿವಿನಾಯಕ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ವಿಜಯ ಕುಮಾರ್ ಕಾಂಜಿ, ಬಳ್ಪ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುಂತಾರು, ಸ್ಥಳೀಯ ಸಿದ್ದಿವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಮುರಳಿಧರ ಎಣ್ಣೆಮಜಲು ಮತ್ತು ಹಿಂದೂ ಜಾಗರಣ ವೇದಿಕೆ ಬಳ್ಪ ಇದರ ಅಧ್ಯಕ್ಷ ಪ್ರಖ್ಯಾತ್ ರೈ ಉಪಸ್ಥಿತರಿದ್ದರು. ಸಭೆಯಲ್ಲಿ ಹಿರಿಯ ಭಜನಾ ಸಾಧಕ ಪ್ರಶಸ್ತಿಗೆ ಪುರಸ್ಕೃತ ವಿಶ್ವನಾಥ ಅರ್ಗುಡಿಯವರನ್ನು ಸನ್ಮಾನಿಸಲಾಯಿತು.
ಜಸ್ವಂತ್ ಸಂಪ್ಯಾಡಿ ಸ್ವಾಗತಿಸಿ ದಿಶಾಂತ್ ಕಲುಂಗುಡಿ ವಂದಿಸಿದರು.
ಚಿದಾನಂದ್ ಕಲುಂಗುಡಿ ಕಾರ್ಯಕ್ರಮ ನಿರೂಪಿಸಿದರು.
ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ 16 ತಂಡಗಳು ಭಾಗವಹಿಸಿ ನಮೋ ಫ್ರೆಂಡ್ಸ್ ಬಾಳಿಲ ಪ್ರಥಮ ಸ್ಥಾನ ಪಡೆದರೆ ರೊಮೆಂಟಿಕ್ ಅತೂರು ದ್ವಿತೀಯ ಸ್ಥಾನ ಪಡೆದುಕೊಂಡರು. ಸಾಯಿ ಮಧುರ ಗುತ್ತಿಗಾರ್ ತೃತಿಯ ಸ್ಥಾನ ಮತ್ತು ಚತುರ್ಥ ಸ್ಥಾನವನ್ನು ಲೋಕಲ್ ಬಾಯ್ಸ್ ಪಡೆದುಕೊಂಡರು.
ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮೊಗ್ರ ಫ್ರೆಂಡ್ಸ್ ಪ್ರಥಮ ಸ್ಥಾನ ಮತ್ತು ವಿನಾಯಕ ಬೀದಿಗುಡ್ದೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here