ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಬಾಳಿಲ‌ ಶಾಖೆಯಲ್ಲಿ ಹೋಲ್ ಸೇಲ್ ವಿಭಾಗ ಶುಭಾರಂಭ

0

 

 

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಬಾಳಿಲ ಶಾಖೆಯಲ್ಲಿ ಹೋಲ್ ಸೇಲ್ ವಿಭಾಗ ಅ. 28ರಂದು ಶುಭಾರಂಭಗೊಂಡಿತು.


ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ನಿರ್ದೇಶಕರಾದ ಮೇದಪ್ಪ ಗೌಡ ತಂಟೆಪ್ಪಾಡಿ, ಸುಬ್ರಹ್ಮಣ್ಯ ಕಾವಿನಮೂಲೆ, ಕರುಣಾಕರ ಶೆಟ್ಟಿ ನಾಲ್ಗುತ್ತು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ, ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬೆಳ್ತಿಗೆ ಅಕ್ಕಿ, ಬೇಳೆಕಾಳುಗಳು, ಟರ್ಪಲ್, ಪ್ಲಾಸ್ಟಿಕ್ ಗೃಹೋಪಯೋಗಿ ಮತ್ತು ಕೃಷಿ ಸಾಮಾಗ್ರಿಗಳು ಹೋಲ್ ಸೇಲ್ ದರದಲ್ಲಿ ಲಭ್ಯವಿದ್ದು, ಮಾರಾಟ ಕೇಂದ್ರವನ್ನು ಹೊಂದಿರುವ ಸಹಕಾರಿ ಸಂಘಗಳಿಗೆ ವಾರದಲ್ಲಿ ಎರಡು ಬಾರಿ ಸಂಘದ ವಾಹನದಲ್ಲಿ ಸರಬರಾಜು ಮಾಡಲಾಗುವುದೆಂದು ಸಂಘದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here