ನಾಳೆ (ಅ.೩೦) ಪೇರಾಲಿನಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿಯಿಂದ ಸ್ವ-ಜಾತಿ ಬಾಂಧವರ ಸಮಾವೇಶ : ಕ್ರೀಡಾಕೂಟ

0

ಗೌಡರ ಯುವ ಸೇವಾ ಸಂಘ ಸುಳ್ಯ, ಮಂಡೆಕೋಲು ಗ್ರಾಮದ ಗೌಡ ಸಮಿತಿ, ಮಹಿಳಾ ಘಟಕ ಮತ್ತು ತರುಣ ಘಟಕ ಮಂಡೆಕೋಲು ಇದರ ಸಂಯುಕ್ತ ಆಶ್ರಯದಲ್ಲಿ ಸ್ವ – ಜಾತಿ ಬಾಂಧವರ ಸಮಾವೇಶ ಮತ್ತು ಗ್ರಾಮ ಮಟ್ಟದ ಕ್ರೀಡಾಕೂಟ ಅ.30ರಂದು ಶ್ರೀರಾಮ ಭಜನಾ ಮಂದಿರ ಪೇರಾಲು- ಅಂಬ್ರೋಟಿ ಇದರ ವಠಾರದಲ್ಲಿ ನಡೆಯುವುದು.

 

ಬೆಳಗ್ಗೆ ಕ್ರೀಡಾ ಕೂಟದ ಉದ್ಘಾಟನೆಯನ್ನು ನಿವೃತ್ತ ಯೋಧ ದೇರಣ್ಣ ಗೌಡ ಅಡ್ಡಂತಡ್ಕ ನೆರವೇರಿಸಲಿದ್ದು ಬಳಿಕ ಕ್ರೀಡಾ ಕೂಟ ನಡೆಯುವುದು. ಅಂಗನವಾಡಿ ಮಕ್ಕಳಿಗೆ ಲಕ್ಕಿಗೇಮ್, 1 – 3ನೇ ತರಗತಿ ಮಕ್ಕಳಿಗೆ ಲಕ್ಕಿಗೇಮ್, 4 ರಿಂದ 6ನೇ ತರಗತಿ ಮಕ್ಕಳಿಗೆ ಲಕ್ಕಿಗೇಮ್, 7 ಮತ್ತು 8 ನೇ ತರಗತಿ ಮಕ್ಕಳಿಗೆ ಲಕ್ಕಿಗೇಮ್, ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಡಾಜ್ ಬಾಲ್ ಸ್ಪರ್ಧೆ, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಹಾಗೂ ಡಾಜ್ ಬಾಲ್ ಸ್ಪರ್ಧೆಗಳು ನಡೆಯುವುದು ಎಂದು ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here