ಪುತ್ತೂರು : ಎಪಿಎಂಸಿ ರಸ್ತೆಯಲ್ಲಿ ಒಮ್ನಿ ಕಾರೊಂದು ಚರಂಡಿಗೆ ಬಿದ್ದ ಘಟನೆ ಮಾ.18ರಂದು ಸಂಜೆ ನಡೆದಿದೆ. ಪುತ್ತೂರು ಪೇಟೆ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರು(ಕೆ.ಎ.21 ಪಿ 4300) ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಗೆ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕ್ರೇನ್ ಮುಖಾಂತರ ಓಮ್ನಿಯನ್ನು ಮೇಲಕ್ಕೆತ್ತಲಾಯಿತು ಎಂದು ತಿಳಿದು ಬಂದಿದೆ.