ಕೆವಿಜಿ ಐಪಿಎಸ್ ನಲ್ಲಿ ಕಿಂಡರ್ ಗಾರ್ಡನ್ ಪುಟಾಣಿಗಳ ನೃತ್ಯ ಸ್ಪರ್ಧೆ

0

 ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಎಲ್ ಕೆ ಜಿ ಮತ್ತು ಯುಕೆಜಿಯ ಪುಟಾಣಿಗಳಿಗೆ ನೃತ್ಯ ಸ್ಪರ್ಧೆಯನ್ನುಅ.29 ರಂದು ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಅಭಿನಂದಿಸಿದರು. ಈ ಸ್ಪರ್ಧೆಗೆ ಸುಳ್ಯ ಇನ್ನರ್ ವೀಲ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಯೋಗಿತಾ ಗೋಪಿನಾಥ್, ಸುಳ್ಯ ಇನ್ನರ್ ವಿಲ್ ಕ್ಲಬ್ ನ ಸದಸ್ಯೆ ಶ್ರೀ ಪ್ರಿಯ ಲೋಕೇಶ್, ಮತ್ತು ಕೆವಿಜಿ ಐಪಿಎಸ್ ನ ಹಿಂದಿ ಶಿಕ್ಷಕಿ ಲಕ್ಷ್ಮಿ ಲಾವಣ್ಯ ತೀರ್ಪುಗಾರರಾಗಿದ್ದರು.

ಈ ಕಾರ್ಯಕ್ರಮವನ್ನು ಕಿಂಡರ್ ಗಾರ್ಡನ್ ನ ಶಿಕ್ಷಕಿಯಾದ ಶ್ರೀಮತಿ ಶಾಂಭವಿ ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ತೀರ್ಪುಗಾರರನ್ನು, ಆಯೋಜಿಸಿದ ಶಿಕ್ಷಕರನ್ನು ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳನ್ನು ಶಿಕ್ಷಕಿ ಸುಜಾತ. ಕೆ ವಂದಿಸಿದರು. ಪ್ರಾಂಶುಪಾಲ ಅರುಣ್ ಕುಮಾರ್ ಎಸ್ ತೀರ್ಪುಗಾರರಿಗೆ ಸ್ಮರಣಿಕೆಯನಿತ್ತು ಗೌರವಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here