ತಿಂಗಳಾಡಿ ದೇವಗಿರಿ ಶ್ರೀ ದೇವತಾ ಭಜನಾ ಮಂದಿರದ ಪ್ರತಿಷ್ಠಾ ಮಂಗಳೋತ್ಸವ

0

  • ಸತ್ಯನಾರಾಯಣ ಪೂಜೆ, ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

 

ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿಯ ಶ್ರೀ ಕ್ಷೇತ್ರ ದೇವಗಿರಿ ಶ್ರೀ ದೇವತಾ ಭಜನಾ ಮಂದಿರದ ೨೭ ನೇ ಪ್ರತಿಷ್ಠಾ ಮಂಗಳೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಮಾ.17 ರಂದು ಶ್ರೀ ಕ್ಷೇತ್ರ ದೇವಗಿರಿಯಲ್ಲಿ ನಡೆಯಿತು. ಬೆಳಿಗ್ಗೆ 7 ಕ್ಕೆ ಕಟೀಲು ಮೇಳದ ದೇವರು ಮತ್ತು ಕಲಾವಿದರನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆದು ಬಳಿಕ ಸ್ಥಳ ಸಾನ್ನಿಧ್ಯ ದೈವಗಳಿಗೆ ತಂಬಿಲ ಸೇವೆ ನಡೆಯಿತು. ತಿಂಗಳಾಡಿ ಶ್ರೀ ಕೃಷ್ಣ ಮಿತ್ರವೃಂದದ 30 ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ನಡೆದು ಮಧ್ಯಾಹ್ನ ಮಹಾಪೂಜೆ, ಕಟೀಲು ಶ್ರೀ ದೇವಿಗೆ ಮಧ್ಯಾಹ್ನದ ಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸ್ವಾಮಿನಗರದ ಶ್ರೀ ಅಯ್ಯಪ್ಪ ಭಜನಾ ಮಂದಿರದವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ ಬಳಿಕ ಕಟೀಲು ಶ್ರೀ ದೇವಿಗೆ ಚೌಕಿ ಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ಮನರಂಜಿಸಿದ ಯಕ್ಷಗಾನ ಬಯಲಾಟ
ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಶ್ರೀ ಕ್ಷೇತ್ರ ದೇವಗಿರಿ ತಿಂಗಳಾಡಿ ಇವರ ಸೇವಾರ್ಥವಾಗಿ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಟೀಲು ಇವರಿಂದ ರಾತ್ರಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು. ನೂರಾರು ಮಂದಿ ಯಕ್ಷಗಾನ ವೀಕ್ಷಿಸಿದರು. ಶ್ರೀ ದೇವತಾ ಸಮಿತಿ, ಶ್ರೀ ದೇವತಾ ಭಜನಾ ಮಂಡಳಿ, ಶ್ರೀ ಕೃಷ್ಣ ಮಿತ್ರ ವೃಂದ ಹಾಗೂ ಯಕ್ಷಗಾನ ಬಯಲಾಟ ಸೇವಾ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here