ಸುಳ್ಯ ಯುವಜನ ಸಂಯುಕ್ತ ಮಂಡಳಿ ವತಿಯಿಂದ ತಾಲೂಕಿನ ಯುವಕ ಯುವತಿ ಮಂಡಲಗಳಿಗೆ ತರಬೇತಿ ಕಾರ್ಯಗಾರ

0

 

ಸುಳ್ಯ ಯುವಜನ ಸಂಯುಕ್ತ ಮಂಡಳಿ.ರಿ. ಇದರ ಆಶ್ರಯದಲ್ಲಿ ಯುವಕ ಯುವತಿ ಮಂಡಲಗಳಿಗೆ ತರಬೇತಿ ಕಾರ್ಯಗಾರ ಯುವ ಸಮರ್ಥತಾ 2022 ಕಾರ್ಯಕ್ರಮ ಅಕ್ಟೋಬರ್ 30 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ವಹಿಸಿದ್ದರು.
ಸುಳ್ಯ ತಾಲೂಕು ಮಕ್ಕಳ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆವಿಜಿ ಐಟಿಐ ಉಪನ್ಯಾಸಕ ಶ್ರೀಧರ ಕರ್ಮಜೆ, ಯುವಜನ ಸೇವೆ ಹಾಗೂ ಕ್ರೀಡಾ ಯೋಜನಾಧಿಕಾರಿ ದೇವರಾಜ್ ಮುತ್ಲಾಜೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ತರಬೇತುದಾರ ಮತ್ತು ಪ್ರಾಧ್ಯಾಪಕ ರಾಜೇಶ್ ಬೆಜ್ಜಂಗಳ ಪುತ್ತೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸುಳ್ಯ ತಾಲೂಕಿನ ವಿವಿಧ ಯುವಕ ಮಂಡಲ ಯುವತಿ ಮಂಡಲದ ಪದಾಧಿಕಾರಿಗಳಿಗೆ ಕಾರ್ಯಕ್ರಮ ಆಯೋಜನೆ ದಾಖಲೆ ಪತ್ರಗಳಲ್ಲಿ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ ವಿಷಯದಲ್ಲಿ ತರಬೇತಿ ನೀಡಿದರು.
ನಂತರ ವೈದ್ಯ ರವಿವರ್ಮ ಕೆ ರವರಿಂದ ಕ್ಯಾನ್ಸರ್ ರೋಗದ ಮಾಹಿತಿ ಮತ್ತು ರೋಗದ ವಿಧಗಳು, ಕಾರಣಗಳು ಮುಂಜಾಗ್ರತೆ ಕ್ರಮಗಳ ಬಗ್ಗೆ ಕಾರ್ಯಗಾರ ನಡೆಯಿತು. ಮಂಗಳೂರು ಕೆಎಂಸಿ ಆಸ್ಪತ್ರೆಯ
ಹೃದಯ ರೋಗ ತಜ್ಞ ಡಾಕ್ಟರ್ ಎಎಂ ಎನ್ ಭಟ್ ರವರಿಂದ ಹೃದಯ ರೋಗದ ಬಗ್ಗೆ ಮಾಹಿತಿ ಶಿಬಿರ ನಡೆಯಿತು. ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ರಾಷ್ಟ್ರೀಯ ತರಬೇತುದಾರ ಎಂಬಿ ಸದಾಶಿವ ರವರಿಂದ ಭಾಷಣ ಕಲೆ ಮಾಹಿತಿ ಕಾರ್ಯಕ್ರಮ ನಡೆಯಿತು.
ವಿವಿಧ ಮನೋರಂಜನ ಆಟಗಳು ಸ್ಪರ್ಧೆಗಳು ನಡೆಯಿತು.

 

LEAVE A REPLY

Please enter your comment!
Please enter your name here